ಸೌತ್ ಆಫ್ರಿಕಾ ಮತ್ತು ಐರ್ಲೆಂಡ್ ತಂಡಗಳ ಮೊದಲ T 20 ಪಂದ್ಯವು ಶೇಖ್ ಜಾಯೆಡ್ ಮೈದಾನದಲ್ಲಿ ನಡೆಯಿತು. ಸೌತ್ ಆಫ್ರಿಕಾ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು.
ಐರ್ಲ್ಯಾಂಡ್ ತಂಡ ಮೊದಲು ಬ್ಯಾಟಿಂಗ್ ಇಳಿದು ಅತ್ಯುತ್ತಮ ಆರಂಭವನ್ನು ಪಡೆಯಿತು. ರೋಸ್ ಅದೈರ್ ನ ಅಮೋಘ 100ರನ್ ಗಳು ಮತ್ತು ನಾಯಕ ಪೌಲ್ ಸ್ಟಿರ್ಲಿಂಗ್ 52 ರನ್ ಗಳಿಂದ ಸೀಮಿತ 20 ಓವರ್ ಗಳಲ್ಲಿ ಐರ್ಲೆಂಡ್ ತಂಡವು 195/6 ರನ್ಗಳನ್ನು ಗಳಿಸಿತು. ಸೌತ್ ಆಫ್ರಿಕಾದ ಬೌಲರ್ ಗಳಾದ ವ್ಯಾಯಾನ್ ಮಲ್ಡರ್ 2 ವಿಕೆಟ್ ಮತ್ತು ಏನ್ಗಿಡಿ, ವಿಲಿಯಂ, ಕೃಜರ್ ತಲಾ 1 ವಿಕೆಟ್ ತೆಗೆದರು.
ಇನ್ನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು ಗುರಿಯನ್ನು ಬೆನ್ನಟ್ಟುವುದರಲ್ಲಿ ವಿಫಲವಾಯಿತು. ಹೆಂಡ್ರಿಕ್ಸ್ 51 ರನ್ ಮತ್ತು ರ್ಯಾನ್ ರಿಕೆಲ್ಟನ್ 36 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ನಂತರ ಬಂದ ಮ್ಯಾಥ್ಯೂ ಬ್ರೀತಕೆ 51 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಸಾಗಿಸಿದರು.
ನಂತರ ಬಂದ ಯಾವುದೇ ಬ್ಯಾಟರ್ ಕೂಡ ಎರಡು ಅಂಕಿ ರನ್ ಗಳಿಸಲಿಲ್ಲ. ಅದರಿಂದ ಸೌತ್ ಆಫ್ರಿಕಾ ತಂಡ ಸೋಲ ಬೇಕಾಯಿತು. ಐರ್ಲೆಂಡ್ ತಂಡದ ಬೌಲರ್ ಗಳಾದ ಮಾರ್ಕ್ ಅದೈರ್ 4 ವಿಕೆಟ್ ಮತ್ತು ಗ್ರಹಾಂ ಹುಮೆ 3 ವಿಕೆಟ್ ಹಾಗೂ ಮ್ಯಾಥ್ಯೂ ಹಮ್ಫ್ರೇಯ್ಸ್ ಮತ್ತು ಬೆಂಜಮಿನ್ ವೈಟ್ ತಲಾ 1 ವಿಕೆಟ್ ಪಡೆದು ಐಲ್ಯಾಂಡ್ ಗೆಲುವಿಗೆ ಕಾರಣರಾದರು.
ಸೀಮಿತ 20 ಓವರ್ ಗಳಲ್ಲಿ ಸೌತ್ ಆಫ್ರಿಕಾ ತಂಡವು 185/9 ಗಳಿಸಿತು ಇದರಿಂದ ಐರ್ಲೆಂಡ್ ತಂಡವು 10 ರನ್ಗಳ ಜಯ ಸಾಧಿಸುವುದರೊಂದಿಗೆ 2 ಪಂದ್ಯಗಳ t20 ಸರಣಿಯಲ್ಲಿ ಸಮಭಾಗ ಸಾಧಿಸುವುದರೊಂದಿಗೆ ಐತಿಹಾಸಿಕ ಗೆಲುವು ಸಾಧಿಸಿದೆ.