ಕೆ.ಆರ್.ಪೇಟೆ: ಬೆಳ್ಳಂಬೆಳಗ್ಗೆ ಸರಗಳ್ಳತನಕ್ಕೆ ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕಳ್ಳನೊಬ್ಬನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯ ಎರ ಕದಿಯಲು ಆರೋಪಿ ಬಂದಿದ್ದು, ಆಕೆಯ ಕೊರಳಿಗೆ ಕೈಹಾಕಿ ಎಳೆದಿದ್ದಾನೆ. ಆದರೆ, ಮಹಿಳೆ ಜಾಗೃತಗೊಂಡು, ಸರ ಆತನ ಕೈ ಸೇರಿದಂತೆ ತಡೆದಿದ್ದಾರೆ. ಈ ವೇಳೆ ಕಳ್ಳ ಓಡಿಹೋಗಲು ಯತ್ನಿಸಿದ್ದಾನೆ.
ತಕ್ಷಣವೇ ಮಹಿಳೆ ಅಕ್ಕಪಕ್ಕದವರನ್ನು ಕೂಗಿಕೊಂಡಿದ್ದು, ತಕ್ಷಣವೇ ವಾಕಿಂಗ್ ಗೆ ಹೋಗುತ್ತಿದ್ದ ಕೆಲ ಯುವಕರು ಓಡಿ ಕಳ್ಳನನ್ನು ಹಿಡಿದಿದ್ದಾರೆ. ಈ ವೇಳೆ ಅಕ್ಕಪಕ್ಕದವರೆಲ್ಲ ಸೇರಿಕೊಂಡು ಕಳ್ಳನನ್ನು ಥಳಿಸಿದ್ದು, ಮಹಿಳೆ ಮಚ್ಚಿನಿಂದಲೇ ಹೊಡೆಯಲು ಪ್ರಯತ್ನಿಸಿದ್ದಾರೆ.
ಈ ವೇಳೆ ಮಹಿಳೆಯನ್ನು ತಡೆದ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

