ಯೂಟ್ಯೂಬ್ ಚಾನೆಲ್ ವೊಂದರ ಸಂದರ್ಶನದಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯಿಂದ ನನ್ನ ಮಗನ ಕ್ರಿಕೆಟ್ ಭವಿಷ್ಯ ನುಚ್ಚುನೂರಾಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಎಷ್ಟೇ ದೊಡ್ಡ ಹೆಸರು ಮಾಡಿದ್ದರೂ ಸಹ ಅವರು ನನ್ನ ಮಗನ ಕ್ರಿಕೆಟ್ ಭವಿಷ್ಯದಲ್ಲಿ ಆಟವಾಡಿರುವುದನ್ನು ನಾನು ಎಂದಿಗೂ ಮರೆಯುವುದಿಲ್ಲ.
2015 ರ ಟೀಮ್ ಇಂಡಿಯಾದ ವಿಶ್ವಕಪ್ ತಂಡಕ್ಕೆ ನನ್ನ ಮಗ ಯುವರಾಜ್ ಸಿಂಗ್ ಆಯ್ಕೆಯಾಗದೆ ಇರುವುದಕ್ಕೆ ಧೋನಿಯೇ ಮುಖ್ಯ ಕಾರಣ. ನನ್ನ ಮಗ ವಿಶ್ವಕಪ್ ನಲ್ಲಿ ಆಟವಾಡುವುದು ಧೋನಿಗೆ ಇಷ್ಟವಿರಲಿಲ್ಲ, ಆ ಕಾರಣದಿಂದ ಯುವರಾಜ್ ಸಿಂಗ್ ವಿಶ್ವಕಪ್ ತಂಡದಿಂದ ಹೊರಗುಳಿಯುವಂತಾಯಿತು.
ಧೋನಿಯ ಈ ನಡೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ತಪ್ಪು ಮಾಡಿದವರು ಯಾರೇ ಆಗಲಿ ನನ್ನ ಮಗನೇ ಆಗಲಿ ನನ್ನ ಕುಟುಂಬದವರೇ ಆಗಲಿ ಅವರನ್ನು ನಾನು ಎಂದಿಗೂ ನನ್ನ ಜೀವನದಲ್ಲಿ ಕ್ಷಮಿಸುವುದಿಲ್ಲ.
ಧೋನಿ ನನ್ನ ಮಗನ ಕ್ರಿಕೆಟ್ ಭವಿಷ್ಯದಲ್ಲಿ ಅಡ್ಡಗಾಲು ಆಗದಿದ್ದರೆ ನನ್ನ ಮಗನ ಕ್ರಿಕೆಟ್ ಭವಿಷ್ಯ ಇನ್ನೂ ನಾಲ್ಕು ಐದು ವರ್ಷದವರೆಗೂ ಮುಂದುವರೆಯುತ್ತಿತ್ತು. ಆದ್ದರಿಂದ ಧೋನಿ ನನ್ನ ಕ್ಷಮೆಗೆ ಎಂದಿಗೂ ಅರ್ಹನಲ್ಲ ಎಂದು ಯೋಗರಾಜ್ ಸಿಂಗ್ ಯೂಟ್ಯೂಬ್ ಚಾನೆಲ್ ವೊಂದರ ಸಂದರ್ಶನದಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ