ಶಾಲೆಗೆ ಕಳಿಸಿ ಅಂದ್ರೆ ಮದುವೆ ಮಾಡಿ ಕಳಿಸ್ತಾರೆ: ಸರಕಾರಕ್ಕೆ ಶಾಲಾ ಬಾಲಕಿ ಅಳಲು
ದಾವಣಗೆರೆ: ಶಾಲೆಗೆ ಹೋಗೋಕೆ ಮೂರ್ ನಾಲ್ಕ್ ಕಿ.ಮೀ ನಡೆದು ಹೋಗ್ಬೇಕು, ಬಸ್ ವ್ಯವಸ್ಥೆ ಇಲ್ಲ, ಹೀಗಾಗಿ, ಶಾಲೆಗೆ ಹೋಗ್ತೀವಿ ಅಂದ್ರೆ ಮದುವೆ ಮಾಡಿ ಕಳಿಸ್ತಾರೆ ಎಂದು ದಾವಣಗೆರೆ ಜಿಲ್ಲೆಯ ಗಿಡದಹಳ್ಳಿ ಗ್ರಾಮದ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾಳೆ.
ಗ್ರಾಮದಲ್ಲಿ ಹೈಸ್ಕೂಲ್ ಇಲ್ಲ, ಹೀಗಾಗಿ, ಸುಮಾರು ನಾಲ್ಕು ಕಿ.ಮೀ. ದೂರದ ಊರಿಗೆ ಹೋಗಬೇಕು. ಗ್ರಾಮದಿಂದ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ, ಶಾಲೆ ನಡೆದುಕೊಂಡು ಹೋಗಬೇಕು. ಪೋಷಕರು ಇಷ್ಟೆಲ್ಲ ಅನಾನುಕೂಲದ ನಡುವೆ ಶಾಲೆಯೇ ಬೇಡ ಎನ್ನುತ್ತಾರೆ ಎಂದು ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಸರಕಾರ ನಮ್ಮೂರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಿ, ಶಾಲೆಗೆ ಹೋಗುವ ಮತ್ತು ಬರುವ ವೇಳೆಗೆ ಬಸ್ ವ್ಯವಸ್ಥೆ ಮಾಡಿದರೆ ಸಾಕು. ಓದಿ ದೊಡ್ಡಮಟ್ಟದಲ್ಲಿ ಬೆಳೆಯಬೇಕು ಎಂಬುದು ನಮ್ಮೆಲ್ಲರ ಕನಸು ಎಂದು ವಿದ್ಯಾರ್ಥಿನಿ ಕೇಳಿಕೊಂಡಿದ್ದಾಳೆ.


