ರೈಲ್ವೆ ಇಲಾಖೆಯ ತತ್ಕಾಲ್ ಟಿಕೆಟ್ ಬುಕಿಂಗ್ ಸೇವೆಯ ಸಮಯವನ್ನು 47 ಸೆಕೆಂಡ್ ಗೆ ಕಡಿಮೆ ಮಾಡುವ ತಂತ್ರಾಂಶವನ್ನು ಅಭಿವದ್ಧಿ ಪಡಿಸಿದ್ದ. ಭಾರತೀಯ ರೈಲ್ವೆ ಇಲಾಖೆ ಇವನ ಮೇಲೆ ಕೇಸ್ ಹಾಕಿತ್ತು. ಸದ್ಯ ಈ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಐಟಿ ಪದವೀಧರ ಔರಂಗಾಬಾದ್‌ನ ಗೌರವ್ ಢಾಕೆ ಏಕ ಸದಸ್ಯ ಪೀಠದ ನ್ಯಾ. ಎಂ. ನಾಗಪ್ರಸನ್ನ ಅವರಿಗೆ ಅರ್ಜಿಯನ್ನು ಸಲ್ಲಿಸಿದ್ದು. ಕೋರ್ಟ್ ಅರ್ಜಿ ಪರಿಶೀಲಿಸಿ ರೈಲ್ವೆ ಇಲಾಖೆಯ ಕ್ರಿಮಿನಲ್ ಕೇಸ್ ಅನ್ನು ರದ್ದು ಪಡಿಸಿದೆ.
ವಾದ ವಿವಾದಗಳನ್ನು ಪರಿಶೀಲಿಸಿ ನ್ಯಾಯಾಲಯವು ” ಮೊದಲು ಒಂದು ಟಿಕೇಟ್ ಬುಕಿಂಗ್ ಗೆ 7 ನಿಮಿಷ 40 ಸೆಕೆಂಡ್ ಸಮಯ ಬೇಕಿತ್ತು. ಈಗ 40 ಸೆಕೆಂಡ್ ಗೆ ಇಳಿದಿದೆ. ಇದು ಸಾರ್ವಜನಿಕರಿಗೆ ಸಹಕಾರಿ ಯಾಗಲಿದೆ.ಅರ್ಜಿದಾರರು ಟಿಕೆಟ್ ಖರೀದಿಸಿಲ್ಲ ಅಥವಾ ಟಿಕೆಟ್ ಪೂರೈಸಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ರೈಲ್ವೆ ಇಲಾಖೆಯ ಪರ ವಕೀಲರು ಹೇಳುವಂತೆ ಈ ವ್ಯಕ್ತಿಯು ಒಂದು ಟಿಕೇಟ್ ಬುಕ್ ಮಾಡಲು 30 ರೂಪಾಯಿಯನ್ನು ಪಡೆದಿದ್ದು ಸುಮಾರು 12,49,710 ಹಣ ಮಾಡಿಕೊಂಡಿದ್ದಾನೆ. ಈ ಪ್ರಕರಣ ಮುಂದುವರೆಯಬೇಕು ಎಂದು ಹೇಳಿದ್ದಾರೆ.
ಆರೋಪದ ಹಿನ್ನೆಲೆ.
ಅರ್ಜಿದಾರರು ಸ್ಟಾಟ್ ಆಫ್ ಕಂಪನಿಯ ಸಂಸ್ಥಾಪಕ. ಇವರು ಒಂದು ತಂತ್ರಾಂಶವನ್ನು ಸಿದ್ಧಪಡಿಸಿದರು. ಕಡಿಮೆ ಅವಧಿಯಲ್ಲಿ ಟಿಕೇಟ್ ಬುಕ್ ಮಾಡಿಕೊಡುವುದು. 2020 ರಲ್ಲಿ ಮೊದಮೊದಲು ಉಚಿತವಾಗಿ ಟಿಕೇಟ್ ಬುಕ್ ಮಾಡಿ ಕೊಡುತ್ತಿದ್ದರು. ನಂತರ 30 ರೂ ದರ ನಿಗದಿ ಪಡಿಸಿದರು.
2020ರ ಸೆ. 29ರಂದು ಅಕ್ರಮವಾಗಿ ರೈಲ್ವೆ ಟಿಕೆಟ್ ಖರೀದಿ ಮತ್ತು ವಿತರಣೆ ಆರೋಪದಡಿ ರೈಲ್ವೆ ಇಲಾಖೆಯು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಸಲ್ಲಿಸಿತು. ಮೂರು ವರ್ಷಗಳ ಬಳಿಕ ನ್ಯಾಯಾಲಯ ಅಂತಿಮ ತೀರ್ಪು ಕೊಟ್ಟಿದೆ.