ಬೀದರ್‌ | ಶಿಕ್ಷಕರಿಗೆ ಕಿರುಕುಳ: ಬಿಇಒ ಅಮಾನತು

Share It

ಬೀದರ್: ಶಿಕ್ಷಕರಿಗೆ ಕಿರುಕುಳ ಕೊಟ್ಟು ಕರ್ತವ್ಯಲೋಪ ಎಸಗಿದ ಕಾರಣಕ್ಕೆ ಬೀದರ್ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್‌. ದೊಡ್ಡೆ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಶುಕ್ರವಾರ ಅಮಾನತುಗೊಳಿಸಿದ್ದಾರೆ.

ದೊಡ್ಡೆ ಅವರ ಸ್ಥಾನಕ್ಕೆ ಕಲಬುರಗಿ ಜಿಲ್ಲೆಯ ಕಮಲಾಪುರದ ಡಯಟ್‌ ಹಿರಿಯ ಉಪನ್ಯಾಸಕರನ್ನು ವರ್ಗಾಯಿಸಿ, ನೇಮಕ ಮಾಡಲಾಗಿದೆ.

ಏಳನೇ ಪರಿಷ್ಕೃತ ವೇತನ ಬಟವಾಡೆಗೆ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಂದ ಹಣ ತೆಗೆದುಕೊಂಡು ಪರಿಷ್ಕೃತ ವೇತನ ಬಿಡುಗಡೆಗೊಳಿಸಿದ್ದಾರೆ. ಕಾಲಮಿತಿ ವೇತನ ಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಮಂಜೂರಿಗೆ ಶಿಕ್ಷಕರಿಂದ ಹಣ ಪಡೆದಿದ್ದಾರೆ.

ದೈಹಿಕ ಸದೃಢ ಪ್ರಮಾಣ ಪತ್ರ ಇಲ್ಲದೇ ರಜೆ ಮತ್ತು ವೇತನ ಬಿಡುಗಡೆ ಮಾಡಿರುವುದು, ಶಿಕ್ಷಕರು ಸಮಸ್ಯೆ ಹೇಳಿಕೊಂಡು ಹೋದರೆ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಕಿರುಕುಳ ನೀಡಿದ ಆರೋಪಗಳ ಕಾರಣಕ್ಕೆ ಅಮಾನತು ಮಾಡಲಾಗಿದೆ.


Share It

You May Have Missed

You cannot copy content of this page