ಬೆಂಗಳೂರು: ಮಾತಿನ ಮನೆಯಲ್ಲಿ ಶನಿವಾರ ಕೈಲಾಸಂ ಜನ್ಮದಿನದ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಂ ಎಸ್ ನರಸಿಂಹ ಮೂರ್ತಿ ಹಾಗೂ ವೈ ವಿ ಗುಂಡೂರಾವ್ ಅವರಿಂದ ವಿಚಾರಧಾರೆ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿತ್ತು.
ಮಾತಿನ ಮನೆಯ ರಾ ಸು ವೆಂಕಟೇಶ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದ್ದರು. ನರಸಿಂಹಮೂರ್ತಿಯವರು ಕೈಲಾಸಂ ಅವರ ಬರಹಗಳ ಬಗ್ಗೆ ಅವರ ಭಾಷಾ ಪ್ರಾವೀಣ್ಯತೆಯ ಬಗ್ಗೆ ಸವಿವರವಾಗಿ ಮಾತನಾಡಿದ್ದರು. ವೈ ವಿ ಗುಂಡೂರಾವ್ ಅವರು ಕೈಲಾಸಂ ಅವರ ವ್ಯಕ್ತಿತ್ವ, ಅವರಿಗಿದ್ದ ಸಂಗೀತ ಜ್ಞಾನ, ಅವರ ನಾಡಕಗಳ ಪಾತ್ರಗಳ ವೈಶಿಷ್ಠ್ಯಗಳ ಬಗ್ಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದ ನಿರೂಪಣೆಯನ್ನು ರಾಧಾ ಕೇಶವ ಹೆಬ್ಬಾರ್ ನಿರ್ವಹಿಸಿದ್ದರು.