ಅಪರಾಧ ರಾಜಕೀಯ ಸುದ್ದಿ

ಅದಾನಿ ವಿರುದ್ಧ ಅಮೇರಿಕಾದಲ್ಲಿ ಕೇಸ್ : 250 ಮಿಲಿಯನ್ ಡಾಲರ್ ಲಂಚದ ಆರೋಪ

Share It


ನ್ಯೂಯಾರ್ಕ್: ಅಮೇರಿಕ ಮೂಲದ ಕಂಪನಿಗಳ ಜತೆಗಿನ ಸೋಲಾರ್ ಯೋಜನೆಗೆ ಸಂಬಂಧಿಸಿ ಗೌತಮ್ ಅದಾನಿ ಕಂಪನಿ 250 ಮಿಲಿಯನ್ ಡಾಲರ್ ಮೊತ್ತದ ಬೃಹತ್ ಲಂಚದ ವ್ಯವಹಾರ ನಡೆಸಿದೆ ಎಂಬ  ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಯಾರ್ಕ್ ನಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ಈ ಕುರಿತು ಅಮೆರಿಕಾದ ನ್ಯಾಯಾಂಗ ಇಲಾಖೆ ದೃಢಪಡಿಸಿದೆ. ಪ್ರಕರಣದಲ್ಲಿ ಗೌತಮ್ ಅದಾನಿ ಹಾಗೂ ಅವರ ಅಳಿಯ ಸಾಗರ್ ಅದಾನಿ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡೆಪ್ಯುಟಿ ಅಟಾರ್ನಿ ಜನರಲ್ ಲೀಸಾ ಮಿಲ್ಲರ್ ಹೇಳಿಕೆ ನೀಡಿದ್ದಾರೆ

20 ವರ್ಷಗಳ ಸೌರಶಕ್ತಿ ಪೂರೈಕೆ ಒಪ್ಪಂದದ ಮೂಲಕ ಎರಡು ಬಿಲಿಯನ್ ಡಾಲರ್ ಹಣವನ್ನು ಸಂಗ್ರಹ ಮಾಡುವ ಗುರಿಯೊಂದಿಗೆ ಸುಮಾರು 250 ಮಿಲಿಯನ್ ಡಾಲರ್ ಹಣವನ್ನು ಲಂಚದ ರೂಪದಲ್ಲಿ ನೀಡಲು ಮಾತುಕತೆ ನಡೆದಿತ್ತು ಎನ್ನಲಾಗಿದೆ.

2020 ರಿಂದ 2024 ರವರೆಗೆ ಸ್ವತಃ ಗೌತಮ್ ಅದಾನಿ ಕೆಲ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ. ಜತೆಗೆ, ದೂರವಾಣಿ ಮೂಲಕವೂ ಈ ವಿಷಯಗಳ ಪ್ತಸ್ತಾಪ ಮಾಡಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ ಎಂದು ಯುಎಸ್ ನ್ಯಾಯಾಂಗ ಇಲಾಖೆ ತಿಳಿಸಿದೆ.

ಅಂಬಾನಿ ಹೊರತುಪಡಿಸಿ ದೇಶದ ಅತಿದೊಡ್ಡ ಶ್ರೀಮಂತ, ಏಷ್ಯಾದ ಎರಡನೇ ಅತಿದೊಡ್ಡ ಶ್ರೀಮಂ‌ತರೆನಿಸಿಕೊಂಡಿರುವ ಅದಾನಿ ಪ್ರಧಾನಿ ಮೋದಿ ಅವರ ಆಪ್ತರೆನಿಸಿಕೊಂಡಿದ್ದಾರೆ. ಈ ಕುರಿತು ಅನೇಕ ಸಲ ಕಾಂಗ್ರೆಸ್ ಮೋದಿ ವಿರುದ್ಧ ಆರೋಪ ಹೊರಿಸಿದೆ.

2013 ರಲ್ಲಿ ‘ಹಿಂಡನ್ ಬರ್ಗ್’ ವರದಿ ಕೂಡ ಗೌತಮ್ ಅದಾನಿಯ ಸಂಪತ್ತಿನ ಬಗ್ಗೆ ಅನುಮಾನಿಸಿತ್ತು. ಅದನ್ನು ಅದಾನಿ ಕಂಪನಿ ನಿರಾಕರಿಸಿತ್ತು. ಇದೀಗ ಅಮೇರಿಕಾದಲ್ಲಿ ಪ್ರಲರಣ ದಾಖಲಾಗಿರುವುದು ಕುತೂಹಲ ಮೂಡಿಸಿದೆ.


Share It

You cannot copy content of this page