ಬೆಳಗಾವಿ: ತಿಂಗಳ ಅವಧಿಯಲ್ಲಿ ಯಮಕನಮರಡಿ ಪಿಎಸ್ಐ ಆಗಿ ನೇಮಕಗೊಂಡಿರುವ ಜಾವೇದ್ ಮುಶಾಪುರಿ ಅವರು ಅವರು ಈಗ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಇತಿಹಾಸ ಬರೆದಿದ್ದಾರೆ.
ಜನಸ್ನೇಹಿ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಜಾವೇದ್ ಮುಶಾಪುರಿ ಅವರು ಈ ಬಾರಿ ಗಣೇಶ ಮೂರ್ತಿಕಾರರ ಬಳಿ ಹೋಗಿ ಗಣಪತಿ ಮೂರ್ತಿಯನ್ನು ತಂದು ಕುಳ್ಳಿರಿಸಿದ್ದಾರೆ. ಈ ಮೂಲಕ ತಾವು ಮತ್ತೊಮ್ಮೆ ಜನಸ್ನೇಹಿ ಅಧಿಕಾರಿ ಎಂದು ಜನರಿಂದ ಗುರುತಿಸುವ ಕೆಲಸ ಮಾಡಿದ್ದಾರೆ.
ಹಣೆಯಲ್ಲಿ ಕುಂಕುಮ ಹಾಗೂ ಶ್ವೇತ ವಸ್ತ್ರಧಾರಿಯಾಗಿ ಬಂದ ಜಾವೇದ್ ಮುಶಾಪುರಿ ಅವರ
ನಡೆಗೆ ಜನ ಅಚ್ಚರಿಗೊಳಗಾದರು.
ಒಟ್ಟಾರೆ ಇದೀಗ ಜಾವೇದ್ ಮುಶಾಪುರಿಯವರ ನಡೆಗೆ ಸಾರ್ವಜನಿಕರಿಂದ ಹಾಗೂ ಗಣಪತಿ ಉತ್ಸವ ಮಂಡಳಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.