ಬೆಂಗಳೂರು: ಸುಮಾರು 10 ವರ್ಷಗಳಿಗೂ ಮೇಲ್ಪಟ್ಟು ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದ 14 ಮೃತಾವಲಂಬಿತರಿಗೆ ಕಚೇರಿ ಸಹಾಯಕ (ಸ್ವಚ್ಚತೆ) ಹುದ್ದೆಗೆ ನೇಮಕಾತಿ ಆದೇಶ ನೀಡಲಾಯಿತು.
KSRTC ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರು ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಮಾಡಿದರು. ಕಳೆದ 1 ವರ್ಷದಲ್ಲಿ ಒಟ್ಟಾರೆ 212 ಮೃತಾವಲಂಬಿತರಿಗೆ ಅನುಕಂಪದ ಆಧಾರದ ನೇಮಕಾತಿ ಮಾಡಲಾಗಿದೆ.

ಕರಾಸಾ ಪೇದೆ (Security Guard)107, ಕಚೇರಿ ಸಹಾಯಕ (ಸ್ವಚ್ಚತೆ)46, ತಾಂತ್ರಿಕ ಸಹಾಯಕ 37, ಚಾಲಕ/ನಿರ್ವಾಹಕ 22 ಸೇರಿ ಒಟ್ಟು 212 ಜನರಿಗೆ ಅನುಕಂಪದ ನೌಕರಿ ಆದೇಶ ಪತ್ರ ನೀಡಲಾಯಿತು.
ಕರಾಸಾ ಪೇದೆ (Security Guard) ಹುದ್ದೆಗಳಿಗೆ 50 ಮೃತಾವಲಂಬಿತರುಗಳಿಗೆ ಮುಂದಿನ ಒಂದು ವಾರದಲ್ಲಿ ದೇಹ ದಾರ್ಢ್ಯತೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸುವ ಮೂಲಕ ಅನುಕಂಪದ ನೇಮಕಾತಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕರು ಅಕ್ರಂ ಪಾಷ, ಸಿಬ್ಬಂದಿ ಹಾಗೂ ಜಾರಿ ನಿರ್ದೇಶಕರಾದ ಡಾ. ನಂದಿನಿ ದೇವಿ ಕೆ., ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕ ಇಬ್ರಾಹಿಂ ಮೈಗೂರ್ ಉಪಸ್ಥಿತರಿದ್ದರು.