ಈಗಾಗಲೇ KPSC ಯು ಕೃಷಿ ಇಲಾಖೆಯ ವಿವಿಧ ವಿಭಾಗಗಳ ಹುದ್ದೆಗೆ ಕಳೆದ ಏಪ್ರಿಲ್ ಮೇ ಜೂನ್ ತಿಂಗಳಿನಲ್ಲಿ ಅರ್ಜಿಯನ್ನು ಕರೆದಿತ್ತು. ಇದೀಗ ಮತ್ತೊಮ್ಮೆ ಅರ್ಜಿಯನ್ನು ಕರೆದಿರುವ ಕೃಷಿ ಇಲಾಖೆ 945 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಮುಖ್ಯವಾಗಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ಆಹ್ವಾನ ಮಾಡಲಾಗಿದೆ. ಹುದ್ದೆಗಳ ಪೈಕಿ 128 ಕೃಷಿ ಅಧಿಕಾರಿ, 817 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಾಗಿವೆ.
ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ – 07-10-2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – 07 -11-2024
ವಿದ್ಯಾರ್ಹತೆ
BSC ಕೃಷಿ , BSC ಆನರ್ಸ್ ಕೃಷಿ – ಈ ಅರ್ಹತೆಯ ಶೇಕಡ 85 ರಷ್ಟು ಹುದ್ದೆಗಳಿಗೆ ಅನ್ವಯ.
ಉಳಿದ ಶೇಕಡ 15 ರಷ್ಟು ಹುದ್ದೆಗಳಿಗೆ ಈ ಕೆಳಗಿನ ಅರ್ಹತೆಯನ್ನು ಅಭ್ಯರ್ಥಿಯು ಹೊಂದಿರಬೇಕು.
- ಬಿ.ಟೆಕ್ – ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ
- ಬಿ.ಟೆಕ್ ಅಗ್ರಿಕಲ್ಚರ್ ಇಂಜಿನಿಯರಿಂಗ್
- ಬಿಎಸ್ಸಿ – ಕೃಷಿ ಮಾರುಕಟ್ಟೆ ಮತ್ತು ಸಹಕಾರ ಅಥವಾ
- ಬಿ.ಟೆಕ್ – ಆಹಾರ ತಂತ್ರಜ್ಞಾನ ಅಥವಾ
- ಬಿಎಸ್ಸಿ – ಅಗ್ರಿಕಲ್ಚರ್ ಇಂಜಿನಿಯರಿಂಗ್ ಅಥವಾ
- ಬಿಎಸ್ಸಿ ಆನರ್ಸ್ – ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್ ಅಥವಾ
- ಬಿಎಸ್ಸಿ ಆನರ್ಸ್- ಕೃಷಿ ಮಾರಾಟ ಮತ್ತು ಸಹಕಾರ ಅಥವಾ
- ಬಿ.ಟೆಕ್ – ಜೈವಿಕ ತಂತ್ರಜ್ಞಾನ ಅಥವಾ
- ಬಿ.ಎಸ್ಸಿ – ಕೃಷಿ ಜೈವಿಕ ತಂತ್ರಜ್ಞಾನ
ವೇತನ
ಕೃಷಿ ಅಧಿಕಾರಿ – 43,100 – 83,900
ಸಹಾಯಕ ಕೃಷಿ ಅಧಿಕಾರಿ – 40,900 – 78,200
ವಯೋಮಿತಿ
ಕನಿಷ್ಠ 18 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗೆ ಗರಿಷ್ಠ 35 ವರ್ಷ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅರ್ಹತೆಯವರಿಗೆ ಗರಿಷ್ಠ 41 ವರ್ಷಗಳು. SC ST ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 43 ವರ್ಷದ ವಯಸ್ಸಿನ ಸಡಿಲಿಕೆ ಇದೆ.
ಅರ್ಜಿಯ ಶುಲ್ಕ
ಸಾಮಾನ್ಯ ಅಭ್ಯರ್ಥಿಗೆ 600. ರೂ
ಹಿಂದುಳಿದ ವರ್ಗದವರಿಗೆ 300. ರೂ
ಮಾಜಿ ಸೈನಿಕರಿಗೆ 50 ರೂ
ಪರಿಶಿಷ್ಟ ಪಂಗಡ ಮತ್ತು ಜಾತಿ , ಪ್ರವರ್ಗ 1 ಕ್ಕೆ ಯಾವುದೇ ಅರ್ಜಿಯ ಶುಲ್ಕ ಇರುವುದಿಲ್ಲ.
ನೇಮಕಾತಿ ವಿಧಾನ
ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಒಟ್ಟು 3 ಪತ್ರಿಕೆಗಳಿದ್ದು ಕನ್ನಡ ಭಾಷಾ ಪತ್ರಿಕೆ 150 ಅಂಕಗಳಿಗೆ, ಸಾಮಾನ್ಯ ಪತ್ರಿಕೆ 300 ಅಂಕಗಳಿಗೆ ಹಾಗೂ ನಿರ್ದಿಷ್ಟ ಪತ್ರಿಕೆ 300 ಅಂಕಗಳಿಗೆ ಇರುತ್ತದೆ.
ಅರ್ಜಿ ಸಲ್ಲಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
https://www.kpsc.kar.nic.in/index.html

