ಆಸ್ತಿಗಾಗಿ ತಂಗಿಯನ್ನು ಕೊಂದ ಅಣ್ಣ: ಪೊಲೀಸರಿಗೆ ಶರಣು
ಗದಗ: ಆಸ್ತಿ ವಿವಾದ ಹಿನ್ನೆಲೆ ಅಣ್ಣನೇ ತಂಗಿಯನ್ನು ಚಾಕುವಿನಿಂದ ಇರಿದು ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಜಿಲ್ಲೆಯ ಮುಂಡರಗಿಯ ಅನ್ನದಾನೀಶ್ವರ ನಗರದಲ್ಲಿ ನಡೆದಿದೆ.
ಅನ್ನದಾನೀಶ್ವರ ನಗರದ ಖುರ್ಷಿದಾ (35) ಕೊಲೆಯಾದಕೆ. ಮಂಗಳವಾರ ಮನೆಯಲ್ಲಿ ಆಸ್ತಿ ವಿಷಯದಲ್ಲಿ ಜಗಳ ಶುರುವಾಗಿ, ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಈಶ್ವರಪ್ಪ ಕ್ಯಾದಿಗೇಹಳ್ಳಿ ಎಂಬಾತ ತಂಗಿ ಖುರ್ಷಿದಾ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮೃತ ಮಹಿಳೆ 14 ವರ್ಷದ ಹಿಂದೆ ಸಲೂನ್ ಯುವಕನನ್ನು ಪ್ರೀತಿಸಿ ಮದುವೆಯಾಗಿ ಆತನ ತೊರೆದು ಬಳಿಕ 2020 ರಲ್ಲಿ ಮೈಬೂಬ್ ಬೆಟಗೇರಿ ಜೊತೆ ಎರಡನೇ ಮದುವೆಯಾಗಿ ಜೀವನ ನಿರ್ವಹಣೆಗಾಗಿ ಅಣ್ಣನ 15 ಎಕರೆ ಜಮೀನಿನಲ್ಲಿ ಪಾಲು ಕೇಳಿದ್ದ ಖುರ್ಷಿದಾ, ಕೋರ್ಟ್ ಮೆಟ್ಟಿಲೇರಿದ್ದಳು.
ಈ ಹಿನ್ನಲೆ ಮನೆಗೆ ಬಂದು ಕೇಸ್ ವಾಪಸ್ ಪಡೆಯವಂತೆ ಅಣ್ಣ ಒತ್ತಾಯ ಮಾಡಿದ್ದಾನೆ. ಆದರೆ, ಅಣ್ಣನ ಮಾತು ಕೇಳದೆ ವಾಗ್ವಾದಕ್ಕಿಳಿದಿದ್ದ ತಂಗಿಯನ್ನು ಸಿಕ್ಕ ಸಿಕ್ಕಲ್ಲಿ ಮನಬಂದಂತೆ ಚಾಕು ಇರಿದು ಬಳಿಕ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ತಾನೇ ಮುಂಡರಗಿ ಪೊಲೀಸರಿಗೆ ಶರಣಾಗಿದ್ದಾನೆ.


