ತುಮಕೂರು: ತುಮಕೂರು-ಯಶವಂತಪುರ ಮೆಮು ರೈಲಿಗೆ ಚಾಲನೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು.
ತುಮಕೂರು-ಯಶವಂತಪುರ ನಡುವಿನ ಹೊಸ ಮೆಮು ರೈಲು ಶುಕ್ರವಾರ ಕಾರ್ಯಾರಂಭ ಮಾಡುತ್ತಿದ್ದು, ಭಾನುವಾರ ಹೊರತುಪಡಿಸಿ ವಾರದ ಎಲ್ಲ ದಿನ ಸಂಚರಿಸಲಿದೆ.
ರೈಲು ಸಂಖ್ಯೆ 06201: ತುಮಕೂರು-ಯಶವಂತಪುರ ಮೆಮು ರೈಲು ಪ್ರತಿದಿನ ಬೆಳಗ್ಗೆ 8.45ಕ್ಕೆ ತುಮಕೂರಿನಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 06202: ಯಶವಂತಪುರ-ತುಮಕೂರು ಮೆಮು ರೈಲು ಸಂಜೆ 5.40ಕ್ಕೆ ಯಶವಂತಪುರದಿಂದ ಹೊರಟು ಸಂಜೆ 7.5ಕ್ಕೆ ತುಮಕೂರು ತಲುಪಲಿದೆ.
ತುಮಕೂರು-ಬಾಣಸವಾಡಿ: ಸೆ.30 ರಿಂದ ತುಮಕೂರು-ಬಾಣಸವಾಡಿ ಮೆಮು ರೈಲು ಸಂಚಾರ ಆರಂಭವಾಗಲಿದೆ. ಈ ಮೆಮು ರೈಲು ಸೋಮವಾರ ಮಾತ್ರ ಕಾರ್ಯನಿರ್ವಹಿಸಲಿದೆ.
ರೈಲು ಸಂಖ್ಯೆ 06205: ಬಾಣಸವಾಡಿ-ತುಮಕೂರು ಮೆಮು ರೈಲು ಪ್ರತಿ ಸೋಮವಾರ ಬೆಳಗ್ಗೆ 6.15ಕ್ಕೆ ಬಾಣಸವಾಡಿಯಿಂದ ಹೊರಟು ಬೆಳಗ್ಗೆ 8.35ಕ್ಕೆ ತುಮಕೂರು ತಲುಪಲಿದೆ.
ರೈಲು ಸಂಖ್ಯೆ 06205: ತುಮಕೂರು-ಬಾಣಸವಾಡಿ ಮೆಮು ರೈಲು ಪ್ರತಿ ಶನಿವಾರ ಸಂಜೆ 7.40ಕ್ಕೆ ತುಮಕೂರಿನಿಂದ ಹೊರಟು ರಾತ್ರಿ 10.5ಕ್ಕೆ ಬಾಣಸವಾಡಿ ತಲುಪಲಿದೆ.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್ ಬಸವರಾಜು ಅವರು, ಶಾಸಕರಾದ ಸಿ.ಬಿ ಸುರೇಶ್ ಬಾಬು, ಬಿ. ಸುರೇಶ್ ಗೌಡ, ಎಂ.ಟಿ ಕೃಷ್ಣಪ್ಪ, ಜಿ.ಬಿ ಜ್ಯೋತಿ ಗಣೇಶ್, ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ. ಗೌಡ ಉಪಸ್ಥಿತರಿದ್ದರು.