ಆದಿತ್ಯ ಬಿರ್ಲಾ ಕಂಪನಿಯಿಂದ ವಿದ್ಯಾರ್ಥಿಗಳಿಗೆ 60,000 ಸ್ಕಾಲರ್ ಶಿಪ್ : ಪದವಿ ವಿದ್ಯಾರ್ಥಿಗಳಿಗೆ ಅವಕಾಶ
ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಷನ್ ನಿಂದ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಪಡೆಯಬಹುದಾಗಿದೆ. ಪದವಿಯನ್ನು ಓದುತ್ತಿರುವವರಿಗೆ ಇದೊಂದು ಬಂಪರ್ ಅವಕಾಶ ಎಂದೇ ಹೇಳಬಹುದು. 40,000 – 60,000 ರೂ ಪಡೆಯಬಹುದಾಗಿದೆ.
ಮುಖ್ಯವಾಗಿ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳು ಇದರ ಅನುಕೂಲ ಪಡೆಯಬಹುದು. ಅವುಗಳೆಂದರೆ,
ಸೋಷಿಯಲ್ ವರ್ಕ್, ಬಿಬಿಎಂ, ಸಂಮೂಹ ಸಂವಹನ, ಬಿಬಿಎ, ಬಿಬಿಎಸ್, ಬಿಹೆಚ್ಎಂ, ಹಣಕಾಸು ಮತ್ತು ಹೂಡಿಕೆ ಅನಾಲಿಸಿಸ್ ಪದವಿ, ಬಿಎಫ್ಎ, ಬಿಎಫ್ಎ, ಬಿಡಿಎಸ್ ಡೆಂಟಲ್, ಬ್ಯಾಚುಲರ್ ಆಫ್ ಡಿಸೈನ್, ಬ್ಯಾಚುಲರ್ ಆಫ್ ಆಪ್ಟೋಮೆಟ್ರಿ, ಬಿ.ಟೆಕ್- ಎಂ.ಟೆಕ್ ಇಂಟಿಗ್ರೇಟೆಡ್, ಎಲ್ಎಲ್ಬಿ, ಬಿಸಿಎ, ಬಿ.ಫಾರ್ಮಾ, ಬ್ಯಾಚುಲರ್ ಇನ್ ಇಂಟೇರಿಯರ್ ಡಿಸೈನ್ , ಆಡಿಯೋಲಜಿ ಅಂಡ್ ಸ್ಪೀಚ್ ಲಾಂಗ್ವೇಜ್ ಪೆಥಾಲಜಿ, ಬಿಎಫ್ಡಿ ಫ್ಯಾಷನ್ ಡಿಸೈನ್, ಬಿಎಸ್ಸಿ ಐಟಿ ,ಮ್ಯಾನೇಜ್ಮೆಂಟ್ ಸ್ಟಡೀಸ್ ಡಿಗ್ರಿ, ಡಿಸೈನಿಂಗ್ ಪದವಿ, ಬ್ಯುಸಿನೆಸ್ ಸ್ಟಡೀಸ್, ಬಿ.ಟೆಕ್, ಬಿ.ಆರ್ಚ್, ಬಿಎಫ್ಟಿ, ಎಂಬಿಬಿಎಸ್, ಬಿ.ಇ, ಬಿವಿಎಸ್ಸಿ ಅಂಡ್ ಎ.ಹೆಚ್, ಬಿಎಫ್ಎ ಫೈನ್ ಆರ್ಟ್ಸ್ ,ಬಿಪಿಟಿ ಫಿಸಿಯೋಥೆರಪಿ, ಬಿಎಸ್ಸಿ ನರ್ಸಿಂಗ್, ಬಿಹೆಚ್ಎಂಎಸ್ , ಬ್ಯಾಚುಲರ್ ಆಫ್ ಆಕ್ಯುಪೇಷನಲ್ ಥೆರಪಿ , ಇಂಟಿಗ್ರೇಟೆಡ್ ಪ್ರೋಗ್ರಾಮ್ ಇನ್ ಮ್ಯಾನೇಜ್ಮೆಂಟ್ .
ವಿದ್ಯಾರ್ಥಿಗಳು ಕಳೆದ ವರ್ಷ ಶೇಕಡ 60 ಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿರಬೇಕು.
ಕುಟುಂಬದ ಆದಾಯ 6,000,00 ಕ್ಕಿಂತ ಹೆಚ್ಚಿರಬಾರದು.
ಭಾರತದ ಪ್ರಜೆಯಾಗಿರಬೇಕು. ವಿದ್ಯಾರ್ಥಿನಿಯರಿಗೆ ಮೊದಲ ಆದ್ಯತೆ.
Buddy4Study ಸಿಬ್ಬಂದಿಯ ಮಕ್ಕಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
https://www.buddy4study.com/page/aditya-birla-capital-scholarship.
ಅವಶ್ಯಕ ದಾಖಲೆಗಳು :
ಹಿಂದಿನ ತರಗತಿಯ ಅಂಕಪಟ್ಟಿ
ವಿದ್ಯಾರ್ಥಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
ಜಿಮೇಲ್ ವಿಳಾಸ, ಮೊಬೈಲ್ ನಂಬರ್.
ಸಹಿ ಸ್ಕ್ಯಾನ್ ಕಾಪಿ.
ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಕಾಪಿ.
ಆಧಾರ್ ಕಾರ್ಡ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಪ್ರಸ್ತುತ ತರಗತಿಯ ಪ್ರವೇಶಾತಿ ದಾಖಲೆ


