ಆರೋಪಿಯ ಆರೋಪಕ್ಕೆ ಡೋಂಟ್ ಕೇರ್; ಎಚ್ಡಿಕೆ ಆರೋಪಕ್ಕೆ ಲೋಕಾಯುಕ್ತ ಎಡಿಜಿಪಿ ಖಡಕ್ ಸ್ಪಷ್ಟನೆ
ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಮೇಲೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಇದೀಗ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.
ಪ್ರಕರಣವೊಂದರ ಆರೋಪಿಯೊಬ್ಬರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ತಮ್ಮ ಮೇಲಿನ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆರೋಪಿ ಅದೆಷ್ಟು ದೊಡ್ಡ ವ್ಯಕ್ತಿಯಾಗಿದ್ದರು, ಆರೋಪಿಯೇ, ನಮಗೆ ನಮ್ಮ ಕರ್ತವ್ಯವೇ ಮುಖ್ಯ ಎಂದು ತಮ್ಮ ಸಹೋದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.
ವದಂತಿ, ಸುಳ್ಳುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ, ನಮ್ಮ ಕರ್ತವ್ಯದ ಹಾದಿಯಲ್ಲಿ ನಾವು ನಡೆಯೋಣ, ನಮಗೆ ಯಾವುದೇ ರಾಜಕೀಯ ಇತಿಮಿತಿಗಳಿಲ್ಲ, ಒಂದು ವೇಳೆ ಬಂದರೂ ಅವೆಲ್ಲವನ್ನೂ ಮೆಟ್ಟಿನಿಂತು ಕೆಲಸ ಮಾಡೋಣ ಎಂದು ಚಂದ್ರಶೇಖರ್ ಕರೆ ನೀಡಿದ್ದಾರೆ.
ಕೆಲವು ಹಂದಿಗಳು ಕೊಚ್ಚೆಯಲ್ಲಿ ನಿಂತು ಮತ್ತೊಬ್ಬರ ಮೇಲೆ ಕೊಚ್ಚೆ ಎಸೆಯುವ ಪ್ರಯತ್ನ ನಡೆಸುತ್ತವೆ. ಹೀಗಾಗಿ, ಹಂದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಎಂ. ಚಂದ್ರಶೇಖರ್ ಕುಟುಕಿದ್ದಾರೆ.


