ಕಾಶ್ಮೀರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ: ಓರ್ವ ಪೊಲೀಸ್ ಹುತಾತ್ಮ

Share It

ಜಮ್ಮು ಮತ್ತು ಕಾಶ್ಮೀರ: ಕಥುವಾ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದು ಓರ್ವ ಪೊಲೀಸ್ ಹುತಾತ್ಮರಾಗಿ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ.

ಭಯೋತ್ಪಾದಕರ ಗುಂಪು ಮನೆಯೊಳಗೆ ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಥುವಾ ಜಿಲ್ಲೆ ಕೋಗ್ (ಮಂಡ್ಲಿ) ಗ್ರಾಮದಲ್ಲಿ ಭದ್ರತಾ ಪಡೆ ಕಾರ್ಯಾಚರಣೆಗಿಳಿದಿದ್ದವು. ಕುಥುವಾದಲ್ಲಿನ ಬಿಲ್ಲವರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಗ್ ಗ್ರಾಮದಲ್ಲಿ ಭದ್ರತಾ ಪಡೆಗಳು ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು.

ಭದ್ರತಾ ಪಡೆಗಳ ತಂಡ ಉಗ್ರರು ಅಡಗಿದ್ದ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಅಡಗಿ ಕುಳಿತಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದೆ. ಈ ವೇಲೆ ಭದ್ರತಾ ಪಡೆಗಳು ಹಾಗೂ ಉಗ್ರರ ಗುಂಡಿನ ಕಾಳಗ ಆರಂಭವಾಗಿದ್ದು, ಕಾರ್ಯಾಚರಣೆಗೆ ಮತ್ತಷ್ಟು ಸೇನಾಪಡೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಮಾಡಿದೆ.

ಗುಂಡಿನ ಚಕಮಕಿ ವೇಳೆ ಮುಖ್ಯ ಪೇದೆ ಹೆಚ್’ಸಿ.ಬಷೀರ್ ಅಹ್ಮದ್ ಅವರು ಹುತಾತ್ಮರಾಗಿದ್ದು, ಎಎಸ್ಐ ಹಾಗೂ ಮತ್ತೋರ್ವ ಅಧಿಕಾರಿ ಗಾಯಗೊಂಡಿದ್ದಾರೆಂದು ಸಹಾಯಕ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ತಳಿಸಿದ್ದಾರೆ.

ಈ ನಡುವೆ ಕುಲ್ಗಾಮ್ ನಲ್ಲಿ ಶನಿವಾರ ನಡೆಸಿದ ಎನ್ಕೌಂಟರ್ ನಲ್ಲಿ ಹತ್ಯೆಯಾದ ಇಬ್ಬರು ಉಗ್ರರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಭದ್ರತಾ ಪಡೆಗಳು 2 ಎಕೆ 47 ರೈಫಲ್‌ಗಳು, 5 ಮ್ಯಾಗಜೀನ್‌ಗಳು, ಪಿಸ್ತೂಲ್, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ.


Share It

You May Have Missed

You cannot copy content of this page