ಬೆಂಗಳೂರು: ಇಂಜಿನಿಯರ್ಸ್ ದಿನದ ಪ್ರಯುಕ್ತ ಸೆಪ್ಟೆಂಬರ್ 15ರಂದು ಇಂಜಿನಿಯರಿಂಗ್ ಪದವಿ ಪಡೆದ ಎಲ್ಲಾ ನಾಗರಿಕರಿಗೂ ವಂಡರ್ಲಾದ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಉಚಿತವಾಗಿ ನೀಡುವ ಕೊಡುಗೆಯನ್ನು ವಂಡರ್ಲಾ ಘೋಷಿಸಿದೆ.
ಸೆಪ್ಟೆಂಬರ್ 15ರಂದು ಈ ಕೊಡುಗೆ ಲಭ್ಯವಿದ್ದು, ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವ ಇಂಜಿನಿಯರಿಂಗ್ ಪದವೀಧರರು, ಡಿಪ್ಲೊಮಾ ಹಾಗೂ ITI ಓದಿರುವವರು ಸಹ ಈ ಕೊಡುಗೆ ಅರ್ಹರು. ಇದಕ್ಕೆ ಯಾವುದೇ ವಯಸ್ಸಿನ ಹಂಗಿಲ್ಲ, ಯಾವುದೇ ವರ್ಷದಲ್ಲಿ ಪದವಿ ಪಡೆದ್ದರೂ ಈ ಕೊಡುಗೆ ಅನ್ವಯವಾಗಲಿದೆ.
ಇದರ ಲಾಭ ಪಡೆಯಲು ವಿದ್ಯಾರ್ಥಿಗಳಾದಲ್ಲಿ ಕಾಲೇಜಿನ ಐಡಿ ಕಾರ್ಡ್ ತೋರಿಸಬೇಕು ಅಥವಾ ಎಂಜಿನಿಯರಿಂಗ್ ಪದವಿ ಪ್ರಮಾಣಪತ್ರವನ್ನು ಪರಿಶೀಲನೆಗಾಗಿ ಪಾರ್ಕ್ನಲ್ಲಿ ಪ್ರಸ್ತುತ ಪಡಿಸಬೇಕಾಗಲಿದೆ.
ಇಂಜಿನಿಯರ್ ವಿದ್ಯಾರ್ಥಿಗಳ ಆಹ್ವಾನ:
ಇನ್ನೂ, ಹಾಸನದ ನವಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಅನಂತಪುರದ ಗೋಕುಲ ಕೃಷ್ಣ ಕಾಲೇಜ್ ಆಫ್ ಇಂಜಿನಿಯರಿಂಗ್ನ 130 ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ವಂಡರ್ಲಾಗೆ ಸೆ. 13ರಂದು ಆಹ್ವಾನಿಸಲಾಗಿದ್ದು, ವಂಡರ್ಲಾದಲ್ಲಿರುವ ಎಲ್ಲಾ ರೈಡ್ಗಳ ಟೆಕ್ನಿಕಲ್ ನಿರ್ವಹಣೆ ಬಗ್ಗೆ ವಿವರಣೆ ನೀಡಲಾಗುತ್ತದೆ.
ವಂಡರ್ಲಾದಲ್ಲಿ ಎಷ್ಟು ರೈಡ್ಗಳಿದ್ದು, ಇವುಗಳ ನಿರ್ವಹಣೆಗೆ ಹಾಗು ಸುರಕ್ಷಿತೆಗೆ ಯಾವ ರೀತಿಯಲ್ಲಿ ಟೆಕ್ನಾಲಜಿ ಬಳಸಲಾಗಿದೆ ಇತ್ಯಾದಿ ವಿಚಾರಗಳ ಬಗ್ಗೆ ವಿವರಣೆ ನೀಡಲಾಗುತ್ತದೆ.
Wonderla ಆನ್ಲೈನ್ ಪೋರ್ಟಲ್ ಮೂಲಕ https://bookings.wonderla.com/ ನಲ್ಲಿ ಮುಂಗಡವಾಗಿ ಟಿಕೆಟ್ ಬುಕ್ ಮಾಡಬಹುದು, ನೇರವಾಗಿ ಪಾರ್ಕ್ ಕೌಂಟರ್ಗಳಿಂದ ಟಿಕೆಟ್ಗಳನ್ನು ಖರೀದಿಸ ಬೆಂಗಳೂರು ಪಾರ್ಕ್: +91 80372 30333 ಅಥವಾ +9945557777ಗೆ ಸಂಪರ್ಕಿಸಿ.

