ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್: ಜಾಮೀನು ಸಿಕ್ಕಿದ 10 ದಿನಗಳ ಬಳಿಕ ಬಿಡುಗಡೆಯಾದ ಮೂವರು

Share It

ತುಮಕೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್​ರನ್ನ ಜೂನ್ 26 ಕ್ಕೆ ಬೆಂಗಳೂರು ಪರಪ್ಪನ ಅಗ್ರಹಾರದ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಸದ್ಯ ಪ್ರಕರಣದ 15 ನೇ ಆರೋಪಿಯಾದ ಕಾರ್ತಿಕ್, 16ನೇ ಆರೋಪಿ ಕೇಶವಮೂರ್ತಿ, 17ನೇ ಆರೋಪಿ ನಿಖಿಲ್​ಗೆ ತಲಾ 2 ಲಕ್ಷ ಬಾಂಡ್ ಹಾಗೂ ತಲಾ ಇಬ್ಬರ ಶ್ಯೂರಿಟಿ ಮೇರೆಗೆ ಜಾಮೀನು ಮಂಜೂರು ಆಗಿದೆ.
ಸತತ 10 ದಿನಗಳ ಬಳಿಕ ಈ ಮೂವರು ಜೈಲಿನಿಂದ ಬಿಡುಗಡೆ ಆಗಿದ್ದು, ಎ-16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಹಾಗೂ ಇನ್ನಿಬ್ಬರಿಗೆ 57 ನೇ ಸಿಸಿಹೆಚ್ ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಜಾಮೀನು ಮಂಜೂರು ಆದರೂ ಈ ಮೂವರು 10 ದಿನಗಳಿಂದ ಬಿಡುಗಡೆ ಆಗಿರಲಿಲ್ಲ. ಸದ್ಯ ಸಂಬಂಧಿಕರು ಜಾಮೀನು ಶ್ಯೂರಿಟಿ ನೀಡಿ ಬಿಡುಗಡೆ ಮಾಡಿಸಿದ್ದಾರೆ. ತಡರಾತ್ರಿಯೇ ಮೇಲ್ ಮೂಲಕ ಜಾಮೀನು ಆದೇಶ ಬಂದರೂ ಸಮಯ ಮೀರಿದ ಕಾರಣ ಇಂದು ಬೆಳಿಗ್ಗೆ 10 ಗಂಟೆಗೆ ತುಮಕೂರು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಆದರೆ ಜೈಲಿನಿಂದ ಹೊರಬಂದ ಈ ಮೂವರೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಕಾರ ವ್ಯಕ್ತಪಡಿಸಿದ್ದು, ನಮಗೆ ಏನು ಗೊತ್ತಿಲ್ಲ ಎಲ್ಲವೂ ತನಿಖಾಧಿಕಾರಿಗಳ ಮುಂದೆ ವಿವರವಾಗಿ ಹೇಳಿದ್ದೇವೆ ಎಂದಷ್ಟೇ ಹೇಳಿದ್ದಾರೆ.

ಇನ್ನು ಮತ್ತೋರ್ವ ಆರೋಪಿ ರವಿಶಂಕರ್ ತುಮಕೂರು ಜೈಲಿನಲ್ಲಿಯೇ ಉಳಿದಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ನುಣುಚಿಕೊಳ್ತಿದ್ದ ಈ ಮೂವರು ತನ್ನ ಸ್ನೇಹಿತರು ಇನೋವಾ ಕಾರಿನಲ್ಲಿ ಬಂದ ತಕ್ಷಣ ಹತ್ತಿ ಹೊರಟು ಹೋಗಿದ್ದಾರೆ.


Share It

You cannot copy content of this page