ಐತಿಹಾಸಿಕ ದಸರಾಗೆ ಅದ್ದೂರಿಯ ಚಾಲನೆ: ಇಂದಿನಿಂದ ಮೇಳೈಸಲಿದೆ ಮೈಸೂರಿನ ವೈಭವ
ಮೈಸೂರು ದಸರಾಗೆ ಸಾಹಿತಿ ಹಂಪಾ ನಾಗರಾಜಯ್ಯರಿಂದ ಚಾಲನೆ
ಮೈಸೂರು: ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಇಂದು ಬೆಳಗ್ಗೆ 9.15 ರಿಂದ 9.40ರ ಶುಭ ವೃಶ್ಚಿಕ ಲಗ್ನದಲ್ಲಿ ಪುಷ್ಪಾರ್ಚಣೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದರು.
ದಸರಾ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಗಣ್ಯರು ಭಾಗಿಯಾಗಿದ್ದಾರೆ. ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ. ಸಮಾರಂಭಕ್ಕೆ ಜಿಲ್ಲಾಡಳಿತದಿಂದ ವಾಟರ್ ಪ್ರೂಫ್ ಪೆಂಡಾಲ್ ನಿರ್ಮಾಣ ಮಾಡಲಾಗಿದೆ.
ಇಂದು ರಾಜ ವಶಂಸ್ಥರಾದ ಯಧುವೀರ್ ಚಾಮರಾಜದತ್ತ ಒಡೆಯರ್ ಬೆಳಗ್ಗೆ 11.30ರಿಂದ ಸಿಂಹಾವರೋಹನ ಮಾಡಲಿದ್ದಾರೆ.


