ಉಪಯುಕ್ತ ಸುದ್ದಿ

ಬೆಂಗಳೂರು ಉ.ವಿವಿಯಲ್ಲಿ ಅಥಿತಿ ಉಪನ್ಯಾಸಕ ಹುದ್ದೆಗೆ ನೇಮಕಾತಿ ಆರಂಭ!

Share It

ಬೆಂಗಳೂರು ಉತ್ತರ ವಿವಿಯಲ್ಲಿ ಅಥಿತಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಕರೆಯಲಾಗಿದೆ. ಅರ್ಹ ಅಭ್ಯರ್ಥಿಗಳು ಇಂದೇ ಅರ್ಜಿಯನ್ನು ಸಲ್ಲಿಸಬಹುದು.

ಬೆಂಗಳೂರು ಉತ್ತರ ವಿವಿಯ ಸ್ನಾತಕೋತ್ತರ ಕೇಂದ್ರ ಮಂಗಸಂದ್ರ ಹಾಗೂ ಆಡಳಿತ ಭವನದಲ್ಲಿನ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಬೋಧನೆ ಮಾಡಲು ಪೂರ್ಣಕಾಲಿನ ಮತ್ತು ಅರೆಕಾಲಿನ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

07-10-2024 ಸಂಜೆ 5 ಗಂಟೆಯೊಳಗೆ ವಿಳಾಸಕ್ಕೆ ತಲುಪಿಸುವುದು.

ಕೆಳಕಂಡ ವಿಷಯದಲ್ಲಿ ಹುದ್ದೆಗಳು ಖಾಲಿ ಇವೆ.

ಕನ್ನಡ – 4
ಆಂಗ್ಲ ಭಾಷೆ- 3
ಅರ್ಥ ಶಾಸ್ತ್ರ- 3
ರಾಜ್ಯ ಶಾಸ್ತ್ರ- 4
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ -5
ಸಮಾಜ ಕಾರ್ಯ- 5
ವಾಣಿಜ್ಯ ಶಾಸ್ತ್ರ- 4
ಸಸ್ಯಶಾಸ್ತ್ರ -8
ಗಣಕ ವಿಜ್ಞಾನ -5
ಭೌತ ಶಾಸ್ತ್ರ- 6
ಗಣಿತ ಶಾಸ್ತ್ರ- 4
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ- 5
ರಸಾಯನ ಶಾಸ್ತ್ರ -8
ಬಿ.ಇಡಿ -6
ಎಂ.ಎ ಎಜುಕೇಷನ್ -3

ಅರ್ಹತೆಗಳು :

ಅಭ್ಯರ್ಥಿಗಳು ಆಯಾ ವಿಷಯದಲ್ಲಿ ಪಿ.ಹೆಚ್.ಡಿ, ಎನ್.ಇ.ಟಿ. ಅಥವಾ ಎಸ್.ಎಲ್.ಇ.ಟಿ. ಯಲ್ಲಿ ಉತ್ತೀರ್ಣನಾಗಿರಬೇಕು. ಅರ್ಜಿಯನ್ನು ವಿವಿಯ ವೆಬ್ ಸೈಟ್ www.bnu.karnataka.gov.in ನಲ್ಲಿ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳಾದ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಸೇವಾನುಭವ ಪತ್ರ, ಪಿ.ಹೆಚ್.ಡಿ,ಎನ್.ಇ.ಟಿ.,ಎಸ್.ಎಲ್.ಇ.ಟಿ. ಪ್ರಮಾಣಪತ್ರ, ಸಂಶೋಧನ ಪ್ರಕಟಣೆಗಳ ಪತ್ರಿಕೆಗಳು ಅಗತ್ಯ ಪತ್ರಗಳನ್ನು ತಲಾ ಎರಡು ಪ್ರತಿಯನ್ನು ಕೆಳಗೆ ನೀಡಲಾದ ವಿಳಾಸಕ್ಕೆ ಸಲ್ಲಿಸುವುದು.

ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ

ಕುಲಸಚಿವರು, ವಿಶ್ವವಿದ್ಯಾಲಯದ ಆಡಳಿತ ಕಛೇರಿ, ಶ್ರೀ ದೇವರಾಜ ಅರಸು ಬಡಾವಣೆ, ಟಮಕ, ಕೋಲಾರ.- 563103

ವೇತನ :

ಅರ್ಹತೆಗೆ ತಕ್ಕಂತೆ ವೇತನವನ್ನು ನಿಗದಿ ಪಡಿಸಲಾಗಿದೆ.

NET,SLET ಅಥವಾ Ph.D ಇರುವ ಪೂರ್ಣಾವಧಿ ಅತಿಥಿ ಉಪನ್ಯಾಸಕರಿಗೆ (ಪಾಲಕ್ಕೆ 16 ಗರಿಷ್ಠ 64 ಗಂಟೆಗಳ) ಪ್ರತಿ ಗಂಟೆಗೆ 780/- ಗರಿಷ್ಠ ರೂ. 49,920/-

NET,SLET ಅಥವಾ Ph.D ಇಲ್ಲದಿರುವ (ವಾದಕ್ಕೆ 16 ಗುಷ್ಟ 64 ಗಂಟೆಗಳ) ಪ್ರತಿ ಗಂಟೆಗೆ 680/- ಗರಿಷ್ಠ ರೂ. 43,520/-

ಉಳಿದ ಅರೆಕಾಲಿಕೆ ಅತಿಥಿ ಉಪನ್ಯಾಸಕರು:i) NET / SLET Ph.D ಹೊಂದಿರುವ ii) NET / SLET/ Ph.D ಇಲ್ಲದಿರುವವರಿಗೆ ಪ್ರತಿ ಗಂಟೆಗೆ ರೂ. 780/-ಪ್ರತಿ ಗಂಟೆಗೆ ರೂ. 680/-

ವೃತ್ತಿಪರ ವಿದ್ವಾಂಸರು | ಉದ್ಯಮಗಳ ಪರಿಣಿತರು / ಶಿಕ್ಷಣ ತಜ್ಞರು ನೀಡುವ ಆಹ್ವಾನಿತ ಉಪನ್ಯಾಸಕರಿಗೆ ಪ್ರತಿ ಗಂಟೆಗೆ ರೂ. 2000/- ಗರಿಷ್ಠ ವಾರಕ್ಕೆ 5 ಗಂಟೆಗಳು


Share It

You cannot copy content of this page