ತಿಂಗಳ ಮೊದಲ ವಾರವೇ ಸಿಲಿಂಡರ್ ನ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಸಾಲು ಸಾಲು ಹಬ್ಬಗಳು ಬರುವ ಅಕ್ಟೋಬರ್ ತಿಂಗಳಲ್ಲಿ ಗ್ಯಾಸ್ ದರ ಕೂಡ ಏರಿಕೆ ಕಂಡಿದೆ. ಈಗಾಗಲೇ ಅಕ್ಟೋಬರ್ 1 ರಿಂದ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ.
2024 ರ ಜುಲೈ ನಂತರ ವಾಣಿಜ್ಯ ಸಿಲಿಂಡರ್ ನ ಬೆಲೆ ಏರಿಕೆಯಾಗುತ್ತಲೇ ಇದೆ. ಆದ್ರೆ ದೆಹಲಿಯಲ್ಲಿ 30 ರೂ ವರೆಗೆ ಇಳಿಕೆಯನ್ನು ಕಂಡಿದೆ. ಆದರೆ ಆಗಸ್ಟ್ ನಲ್ಲಿ ಮತ್ತೆ 8.50 ರೂ ರಷ್ಟು ಹೆಚ್ಚಳವಾಗಿತ್ತು. ಒಟ್ಟಾರೆ 3 ತಿಂಗಳಲ್ಲಿ 39 ರೂ ಹೆಚ್ಚಾಗಿದೆ.
ಅದರಲ್ಲಿಯೂ ವಾಣಿಜ್ಯ ಬಳಕೆಯ 14 ಸಿಲಿಂಡರ್ ನಲ್ಲಿ ಯಾವುದೇ ವ್ಯತ್ಯಾಸ ಇಲ್ಲ . ಆದ್ರೆ 19 ಕೆಜಿ ವಾಣಿಜ್ಯ ಬಳಕೆಯ ಗ್ಯಾಸ್ ನ ಬೆಲೆ ಮಾತ್ರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 48 ರೂಪಾಯಿ ಏರಿಕೆಯಾಗಿದ್ದು 19 ಕೆಜಿ ಸಿಲಿಂಡರ್ ಗೆ ರೂ 1,818 ಆಗಿದೆ.
ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆ ಸದ್ಯ ಬೆಂಗಳೂರಿನಲ್ಲಿ 805.50 ಇದೆ.