ಬೆಂಗಳೂರು: ಮಾದಾವರ ಮತ್ತು ನಾಗಸಂದ್ರ ನಡುವಿನ ಮೆಟ್ರೋ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಸಿಕ್ಕಿದ್ದು, ಶನಿವಾರದಿಂದ ಸಂಚಾರ ಆರಂಭಗೊಳ್ಳಲಿದೆ.
ಶುಕ್ರವಾರ ಮಾದಾವರ ಮತ್ತು ನಾಗಸಂದ್ರ ನಿಲ್ದಾಣಗಳ ನಡುವಿನ ಸಂಚಾರದ ಪ್ರಯೋಗಿಸಿ ಪ್ರಯಾಣ ನಡೆಸಲಾಯಿತು. ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ, ಅಂತಿಮ ಅನುಮತಿ ನೀಡಿದ್ದಾರೆ.
ಹಸಿರು ಬಣ್ಣದ ಮಾರ್ಗ ನಾಗಸಂದ್ರ ಮತ್ತು ಕನಕಪುರ ರಸ್ತೆಯ ಕೇಂದ್ರ ರೇಷ್ಮೆ ಮಂಡಳಿ ನಡುವಿನ ನಿಲ್ದಾಣಗಳ ನಡುವೆ ಕಾರ್ಯನಿರ್ವಹಿಸುತಿತ್ತು. ತುಮಕೂರು ರಸ್ತೆಯ ನಾಗಸಂದ್ರ ನಿಲ್ದಾಣದಿಂದ ಮಾದಾವರ ನಡುವೆ ಮೆಟ್ರೋ ವಿಸ್ತರಣೆ ನಡೆದಿತ್ತು.
ಇದೀಗ ಈ ಎರಡು ನಿಲ್ದಾಣಗಳ ನಡುವಿನ ಸಂಚಾರ ಆರಂಭವಾಗಲಿದ್ದು, ನೆಲಮಂಗಲ ಮಾರ್ಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದರಿಂದ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ.