ಬೆಂಗಳೂರು: ಕೊಪ್ಪಳ ಜಿಲ್ಲೆಯ ಅಂಗನವಾಡಿ ಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದಿರುವ ಕಾರಣಕ್ಕೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರನ್ನು ಅಮಾನತು ಮಾಡಲಾಗಿದೆ
ಈ ಕುರಿತು ಸರಕಾರದ ಅಧೀನ ಕಾರ್ಯದರ್ಶಿ ರಶ್ಮೀ ಅವರು ಆದೇಶ ಹೊರಡಿಸಿದ್ದು, ಕೊಪ್ಪಳ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ತಿಪ್ಪಣ್ಣ ಸಿರಸಗಿ ಅವರನ್ನು ಅಮಾನತು ಮಾಡಿದ್ದಾರೆ.
ಜಿಲ್ಲೆಯ ಅಂಗನವಾಡಿಯಲ್ಲಿ ಸಾಲು ಸಾಲು ಅವಾಂತರ ನಡೆದಿದ್ದು, ಶಿಥಿಲ ಕಟ್ಟಡಗಳು, ಮೂಲಸೌಕರ್ಯ ಕೊರತೆ, ಮಕ್ಕಳಿಗೆ ಮೊಟ್ಟೆ ಕೊಡದ ಸಹಾಯಕಿಯ ವಿಡಿಯೋ ವೈರಲ್ ಸೇರಿದಂತೆ ಅನೇಕ ವಿಚಾರದಲ್ಲಿ ವಿವರಣೆ ಕೇಳಲಾಗಿತ್ತು.
ಇಲಾಖೆಯ ಸಮರ್ಪಕ ನಿರ್ವಹಣೆಯಲ್ಲಿ ತಿಪ್ಪಣ್ಣ ವಿಫಲವಾಗಿರುವುದು ಮತ್ತು ಸರಕಾರಕ್ಕೆ ನೀಡಿದ ವಿವರಣೆಯಲ್ಲಿ ಸರಿಯಾಗಿ ಮಾಹಿತಿ ನೀಡದಿರುವ ಕಾರಣಕ್ಕಾಗಿ ಸರಕಾರದ ಅಧೀನ ಕಾರ್ಯದರ್ಶಿ ಅವರು, ಅಮಾನತು ಆದೇಶ ಹೊರಡಿಸಿದ್ದಾರೆ.