ರಾಜಕೀಯ ಸುದ್ದಿ

ಚಿಕ್ಕೋಡಿ ಪುರಸಭೆ ಚುನಾವಣೆ : ಕೊನೆಗೂ ಅವಿರೋಧವಾಗಿ ಆಯ್ಕೆ

Share It

ಬೆಳಗಾವಿ: ಚಿಕ್ಕೋಡಿ ಪುರಸಭೆಯ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ವೀಣಾ ಜಗದೀಶ ಕವಟಗಿಮಠ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಇರ್ಫಾನ್ ಬೇಪಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ಚುನಾವಣೆಗೆ ದಿನ ನಿಗದಿಯಾಗಿತ್ತು. ಆದರೆ, ಇಬ್ಬರೂ ಅವಿರೋಧವಾಗಿ ಆಯ್ಕೆ ಆಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಚಿಕ್ಕೋಡಿ ಪುರಸಭೆ ಒಟ್ಟು 23 ಸದಸ್ಯರನ್ನು ಹೊಂದಿದೆ. ಇದರಲ್ಲಿ ಬಿಜೆಪಿ 13, ಕಾಂಗ್ರೆಸ್ 10 ಸದಸ್ಯರನ್ನು ಹೊಂದಿದೆ.

ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಮತ್ತು ಸದ್ಯ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೀಣಾ ಅವರ ಪತಿ ಜಗದೀಶ ಅವರ ಕಾರ್ಯತಂತ್ರದ ಫಲವಾಗಿ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮಿಶ್ರ ಆಡಳಿತ ಸಾಧ್ಯವಾಗಿದೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ತಲಾ ಒಬ್ಬೊಬ್ಬರು ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಕೊನೆಗೂ ತಹಸಿಲ್ದಾರ್ ಚಿದಂಬರ ಕುಲಕರ್ಣಿ ಅವರು ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದ್ದಾರೆ.

ಚಿಕ್ಕೋಡಿಯ 20ನೇ ವಾರ್ಡಿನ ವೀಣಾ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ಪರ ಗೆಲುವು ಸಾಧಿಸಿದ್ದರು. ಎಂಟನೇ ವಾರ್ಡಿನ ಇರ್ಫಾನ್ ಅವರು ಸಹ ಮೊದಲಬಾರಿ ಆಯ್ಕೆಯಾಗಿ ಅಧಿಕಾರ ಪಡೆದುಕೊಂಡಿದ್ದಾರೆ.


Share It

You cannot copy content of this page