ಚೆನ್ನೈ: ಮರೀನಾ ಬೀಚ್‌ನಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಭಾರತೀಯ ವಾಯುಸೇನೆಯ ಏರ್ ಶೋ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದ 3ಮಂದಿ ಪೇಕ್ಷಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾವಿಗೆ ಹೀಟ್ ಸ್ಟ್ರೋಕ್ ಕಾರಣ ಎಂದು ವೈದ್ಯರು ತಿಳಿಸಿದ್ದು, ಅಂತೆಯೇ ಕಾರ್ಯಕ್ರಮದಲ್ಲಿ ನಡೆದ ಅಸ್ವಸ್ಥರಾಗಿದ್ದಾರೆ. ಕಾಲ್ತುಳಿತದಲ್ಲಿ 250ಕ್ಕೂ ಅಧಿಕ ಮಂದಿ ಸಿಲುಕಿ ಎಂದು ತಿಳಿದುಬಂದಿದೆ.
ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ 20ಕ್ಕೂ ಹೆಚ್ಚು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ವಾಯುಸೇನೆಯ 92ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚೆನ್ನೈ ಮರೀನಾ ಬೀಚ್ ನಲ್ಲಿ ವಾಯುಸೇನೆ ಏರ್ ಶೋ ಆಯೋಜಿಸಿತ್ತು. ಈ ವಾಯುಶೋ ವೀಕ್ಷಣೆಗೆ 5 ಲಕ್ಷ ಮಂದಿ ಆಗಮಿಸಿದ್ದರು ಎನ್ನಲಾಗಿದೆ. ಬೆಳಗ್ಗೆ 11 ಗಂಟೆಗೆ ಏರ್ ಶೋ ಆರಂಭವಾಗಿದ್ದು, ಈ ವೇಳೆ ಬಿಸಿಲಿನ ಝಳಕ್ಕೆ ಹಲವರು ಅನಾರೋಗ್ಯಕ್ಕೀಡಾಗಿದ್ದು, ಈ ಪೈಕಿ 3ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ವಾಯುಸೇನೆಯ ಈ ಪ್ರತಿಷ್ಠಿತ ಏರ್ ಶೋನಲ್ಲಿ ರಫೇಲ್ ಸೇರಿದಂತೆ 72 ವಿಮಾನಗಳು ಪಾಲ್ಗೊಂಡಿದ್ದವು. ಸ್ವದೇಶಿ ನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂದ್ ಮತ್ತು ಹೆರಿಟೇಜ್ ವಿಮಾನ ಡಕೋಟಾ ಕೂಡ ಏರ್ ಶೋನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದವು. ಅಂತೆಯೇ ಈ ಏರ್ ಶೋ ವಿಶೇಷ ಗರುಡ್ ಫೋರ್ಸ್ ಕಮಾಂಡೋಗಳ ಸಿಮ್ಯುಲೇಟೆಡ್ ರಕ್ಷಣಾ ಕಾರ್ಯಾಚರಣೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರದರ್ಶನವನ್ನು ಒಳಗೊಂಡಿತ್ತು.