ಕ್ರೀಡೆ ಸುದ್ದಿ

ಚಾಂಪಿಯನ್ಸ್ ಹಾಕಿ ಟ್ರೋಫಿ: ಪಾಕ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

Share It

2024ರ ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿಯಲ್ಲಿ ಭಾರತವು ಸಾಂಪ್ರದಾಯಿಕ ವೈರಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಸತತ 5ನೇ ಗೆಲುವಿನೊಂದಿಗೆ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.

ಚೀನಾದ ಮೊಕಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿಯ ತನ್ನ 5ನೇ ಗುಂಪಿನ ಪಂದ್ಯದಲ್ಲಿ ಭಾರತದ ಪುರುಷರ ತಂಡವು ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಸೋಲಿಸಲು ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಆಟ ಎನ್ನಬಹುದು. ಏಕೆಂದರೆ ಮುಂಭಾಗದಿಂದ ನಾಯಕನಾಗಿ ಹರ್ಮನ್ ಪ್ರೀತ್ ಸಿಂಗ್ ಮುನ್ನಡೆ ಆಟಗಾರನಾಗಿ ಆಡಿ ತಂಡವನ್ನು ಮುನ್ನಡೆಸಿದರು.

ಆದಾಗ್ಯೂ, ಭಾರತವು ಆರಂಭದಲ್ಲೇ ಹಿನ್ನಡೆ ಕಂಡಿತು.
ಮೊದಲ ಕ್ವಾರ್ಟರ್ ನ 8ನೇ ನಿಮಿಷದಲ್ಲಿ ಪಾಕಿಸ್ತಾನ ಪರ ಅಹ್ಮದ್ ನದೀಂ ಗೋಲು ಗಳಿಸಿ ಭಾರತಕ್ಕೆ ಶಾಕ್ ನೀಡಿ ಪಾಕಿಸ್ತಾನ 1-0 ಯಿಂದ ಮುನ್ನಡೆ ಸಾಧಿಸಲು ಕಾರಣರಾದರು.

ಆದರೆ ಮೊದಲಾರ್ಧದಲ್ಲಿ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು 2 ಪೆನಾಲ್ಟಿ ಕಾರ್ನರ್ ಗೋಲುಗಳ ಮೂಲಕ
ಭಾರತಕ್ಕೆ 2-1 ಗೋಲುಗಳಿಂದ ಮುನ್ನಡೆ ಒದಗಿಸಿದರು.

ಪಾಕಿಸ್ತಾನ 2ನೇ ಕ್ವಾರ್ಟರ್ ನ 13ನೇ ನಿಮಿಷದಲ್ಲಿ ಹಾಗೂ 3ನೇ ಕ್ವಾರ್ಟರ್ ನ 19ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿ ಸೋಲೊಪ್ಪಿತು.

ಆದಾಗ್ಯೂ ಗುಂಪಿನ ಹಂತದಲ್ಲಿ ಈವರೆಗೆ ಭಾರತ, ಪಾಕಿಸ್ತಾನ ಮತ್ತು ಕೊರಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಉಳಿದ ಒಂದು ಸೆಮಿಫೈನಲ್
ಸ್ಥಾನಕ್ಕೆ ಮಲೇಷ್ಯಾ ಮತ್ತು ಚೀನಾ ತಂಡಗಳು ಈಗ ಪೈಪೋಟಿಯಲ್ಲಿವೆ.


Share It

You cannot copy content of this page