ಬೆಂಗಳೂರು:ಬಿಬಿಎಂಪಿಯ ವ್ಯಾಪ್ತಿಯಲ್ಲಿ ಬರುವ ಕನ್ನಡ ಉಪನ್ಯಾಸಕರ ಹುದ್ದೆಯ ನೇಮಕಾತಿಗೆ ಆದೇಶವನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಹಾಗೂ ಅರ್ಜಿಯನ್ನು ಸಲ್ಲಿಸುವ ವಿಧಾನವನ್ನು ಈ ಕೆಳಗಿನಂತೆ ನೋಡೋಣ ಬನ್ನಿ.
ಗ್ರೂಪ್ ಬಿ ವೃಂದದ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದ್ದು, ಇದೆ ನವೆಂಬರ್ 07 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಅಭ್ಯರ್ಥಿಗಳು ಇಂದಿನಿಂದಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಯೋಮಿತಿ :
ಕನಿಷ್ಠ 18 ರಿಂದ ಗರಿಷ್ಠ 40 ವರ್ಷ
ವೇತನ :
43100-83900
ಆಯ್ಕೆಯ ವಿಧಾನ:
ಯಾವುದೇ ಸಂದರ್ಶನ ಅಥವಾ ಲಿಖಿತ ಪರೀಕ್ಷೆ ಇರುವುದಿಲ್ಲ. ಹುದ್ದೆಗೆ ಬೇಕಾದ ಅರ್ಹತೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ. 29 ವರ್ಷದೊಳಗಿನ ಒಂದು ಮೆರಿಟ್ ಲಿಸ್ಟ್ ಹಾಗೂ 29 ರಿಂದ 40 ವರ್ಷದವರ ಒಂದು ಲಿಸ್ಟ್ ತಯಾರಿಸಿ, ನಂತರ ದಾಖಲಾತಿ ಪರಿಶೀಲನೆ ನಡೆಸಲಾಗುವುದು.
ಅರ್ಹತೆ:
ಕನ್ನಡ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಮಾಡಿದ್ದಾರೆ ಸಾಕು. ಯಾವುದೇ ಕಾರ್ಯನುಭವ ಬೇಕಿಲ್ಲ.
ಅರ್ಜಿಯನ್ನು ಸಲ್ಲಿಸಲು ವಿಧಾನ :
ಮೊದಲು http://www.kpsc.kar.nic.in/’ ಗೆ ಭೇಟಿ ನೀಡಿ. ಬಳಿಕ ‘Apply Online for Various Notifications’ ಅನ್ನು ಕ್ಲಿಕ್ ಮಾಡಿ. ಬೇರೆ ವೆಬ್ ಪೇಜ್ ತೆರೆಯುತ್ತದೆ. ಸ್ಕ್ರಾಲ್ ಡೌನ್ ಮಾಡಿ.
Click Here For One Time Registration’ ಅನ್ನು ಆಯ್ಕೆ ಮಾಡಿ. ‘New Registration’ ಎಂದಿರುವ ಮೇಲೆ ಕ್ಲಿಕ್ ಮಾಡಿ. ಈ ಹಂತದಲ್ಲಿ ಕೇಳಲಾದ ಎಲ್ಲ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಬೇಕು.
ಈಗಾಗಲೇ ಕೆಪಿಎಸ್‌ಸಿ ವೆಬ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿದ್ದಲ್ಲಿ, ಯೂಸರ್ ನೇಮ್, ಪಾಸ್‌ವರ್ಡ್ ನೀಡಿ ಲಾಗಿನ್ ಆಗಲು ‘Login’ ಎಂದಿರುವಲ್ಲಿ ಕ್ಲಿಕ್ ಮಾಡಿ. ಬಲಿಕ ಅಗತ್ಯ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ.