ತೆರಿಗೆ ಕಟ್ಟಬೇಕು ಅಂದ್ರೆ ಸಂಬಂಧ ಪಟ್ಟ ಕಚೇರಿಗೆ ಹೋಗಬೇಕಿತ್ತು. ಅಥವಾ 1 ಲಕ್ಷದ ವರೆಗೆ ಮೊಬೈಲ್ ನಲ್ಲಿಯೇ ಪಾವತಿ ಮಾಡಬಹುದಿತ್ತು. ಆದ್ರೆ ಇನ್ನು ಮುಂದೆ ಸುಮಾರು 5 ಪಕ್ಷದ ವರೆಗಿನ ತೆರಿಗೆಯನ್ನು ಮೊಬೈಲ್ ನಲ್ಲಿ ಯುಪಿಐ ಬಳಸಿಕೊಂಡು ಕಟ್ಟಬಹುದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಸುತ್ತೋಲೆ ಹೊರಡಿಸಿದೆ.
ತೆರಿಗೆಯ ಹಣವನ್ನು ಪಾವತಿ ಮಾಡಲು ರಜೆ ತೆಗೆದುಕೊಂಡು ಕಚೇರಿಯ ಬಳಿಗೆ ಹೋಗಿ ಒಂದಷ್ಟು ಸಹಿ ಪಡೆದು ಹಣವನ್ನು ಪಾವತಿ ಮಾಡಬೇಕಿತ್ತು. ಆದ್ರೆ ಈಗ ನೀವು ಸಮಯಕ್ಕೆ ಸರಿಯಾಗಿ ನೀವು ಕಟ್ಟಬೇಕಾದ ಹಣವನ್ನು ಕುಂತ್ತಲ್ಲಿಯೇ ಪಾವತಿ ಮಾಡಬಹುದಾಗಿದೆ.
ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಹಣಕಾಸು ವ್ಯವಹಾರಗಳು ಯುಪಿಐ ನಿಂದಲೇ ನಡೆಯುತ್ತಿವೆ. ಅದೇ ಕಾರಣಕ್ಕಾಗಿ ಈ ಮೊದಲು ಕಡಿಮೆ ಹಣವನ್ನು ಪಾವತಿ ಮಾಡುವುದಕ್ಕೆ ಅವಕಾಶ ಮಾಡಿ ಕೊಟ್ಟಿದ್ದ ಎನ್ ಪಿಸಿಐ ಈಗ 5 ಲಕ್ಷಕ್ಕೆ ಅವಕಾಶ ಕೊಟ್ಟಿದೆ.
ಈ ಕುರಿತಂತೆ ಬ್ಯಾಂಕುಗಳು , ವಹಿವಾಟು ಕಂಪನಿಗಳು ಮತ್ತು ಯುಪಿಐ ಸಂಸ್ಥೆಗಳು ಸುತ್ತೋಲೆಯ ಪ್ರಕಾರ ಸೆ.15 ರೊಳಗೆ ಇದನ್ನು ಜಾರಿ ಮಾಡಬೇಕು ಎಂದು ತಿಳಿಸಿದೆ. 1 ಲಕ್ಷದಿಂದ 5 ಲಕ್ಷದ ವರೆಗೆ ಪಾವತಿಯನ್ನು ಹೆಚ್ಚಿರುವುದರಿಂದ ಅನುಕೂಲವಾಗಲಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

