ಅಪರಾಧ ಸುದ್ದಿ

ಆಟೋ ಚಾಲಕರ ವಿರುದ್ಧ 6,137 ಪ್ರಕರಣ ದಾಖಲು: ಪ್ರಯಾಣಿಕರಿಗೆ ದೌರ್ಜನ್ಯ ಆರೋಪದಡಿ ಕಾರ್ಯಾಚರಣೆ

Share It

ಬೆಂಗಳೂರು: ಪ್ರಯಾಣಿಕರ ಮೇಲೆ ಕ್ಷುಲ್ಲಕ ಕಾರಣಕ್ಕೆ ದೌರ್ಜನ್ಯಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ಪೊಲೀಸರು ಅಟೋ ಚಾಲಕರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿ 9 ತಿಂಗಳಲ್ಲಿ 6,137 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಟೋ ಚಾಲಕರ ವಿರುದ್ಧ ಪ್ರಯಾಣಿಕರು ಕರೆದ ಸ್ಥಳಕ್ಕೆ ಬರದೇ ಇರುವುದು, ಹೆಚ್ಚಿನ ಬಾಡಿಗೆಗೆ ಬೇಡಿಕೆ, ಪ್ರಯಾಣಿಕರನ್ನು ಕರೆದೊಯ್ದು ಸುಲಿಗೆ ಮಾಡುವ ದೂರುಗಳು ಅಧಿಕವಾಗುತ್ತಿವೆ. ಅಲ್ಲದೇ ಮೆಟ್ರೊ ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಅಡ್ಡ ಗಟ್ಟಿ ಕಿರುಕುಳ ನೀಡುತ್ತಿರುವ ಕುರಿತು ದೂರುಗಳ ಸಂಖ್ಯೆ ಅಧಿಕವಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ಸೆ.19ರ ರಾತ್ರಿ ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆಟೋ ಚಾಲಕ ಸೇರಿ ಇಬ್ಬರನ್ನು ಗೋವಿಂದರಾಜನಗರ ಪೊಲೀಸರು ಠಾಣೆ ಬಂಧಿಸಿದ್ದರು. ಆಟೋ ಚಾಲಕ ಶಿವಕುಮಾ‌ರ್ ಹಾಗೂ ಮಂಟೇಪ್ಪ ಬಂಧಿತ ಸುಲಿಗೆಕೋರರು.

ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ್ ದೂರುದಾರ ರಾಮಕೃಷ್ಣ ಎಂಬವರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿತ್ತು. ಆರೋಪಿ ಸಿವಕುಮಾರ್, ಮಂಟೆಪ್ಪ ಎಂಬ ಆರೋಪಿಗಳು ಸೆ.19ರಂದು ವ್ಯಕ್ತಿಯೋರ್ವನನ್ನು ಆಟೋ ಹತ್ತಿಸಿ ಚಾಕು ತೊರಿಸಿ ಸುಲಿಗೆ ಮಾಡಿದ್ದರು.

ಇತ್ತೀಚೆಗೆ ಮೈಕೊ ಲೇಔಟ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಚೆನೈನಿಂದ ಬಂದಿದ್ದ ಯುವತಿಯನ್ನು ಸಿಲ್ಕ್ ಬೊಡ್೯ನಲ್ಲಿ ಆಟೋ ಹತ್ತಿಸಿ ದುಪ್ಪಟ್ಟು ಹಣ ನೀಡುವಂತೆ ಸಂತೋಷ್ ಒತ್ತಾಯಿಸಿದ್ದ. ಹೆಚ್ಚಿನ ಹಣ ನೀಡದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.

ಇತ್ತೀಚಿನ ದಿನಗಳಲ್ಲಿ ಅಟೋ ಚಾಲಕರು ನಿಯಮ‌ ಉಲ್ಲಂಘಿಸಿ ಪ್ರಯಾಣಿಕರ ಮೇಲೆ ದೌರ್ಜನ್ಯ ಎಸಗುತ್ತಿರುವ ಹಿನ್ನೆಲೆ ಚಾಲಕರ ಮೇಲೆ ನಿಗಾವಹಿಸಿ ಕಾರ್ಯಾಚರಣೆ ಬಿಗಿಗೊಳಿಸಲಾಗಿದೆ. ಇಂತಹ ಘಟನೆ ನಡೆದರೆ ಅಂತಹ ಚಾಲಕರ ಪರವನಾಗಿ ರದ್ದು ಮಾಡುವುದಾಗಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.


Share It

You cannot copy content of this page