ಆರೋಗ್ಯ ಸುದ್ದಿ

ಯುವಕನ ಸಣ್ಣ ಕರುಳಿನಲ್ಲಿತ್ತು ಜೀವಂತ ಜಿರಲೆ:ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

Share It

ಹೊಸದಿಲ್ಲಿ : 23 ವರ್ಷದ ಯುವಕನ ಸಣ್ಣ ಕರುಳಿನಲ್ಲಿ 3 ಸೆ.ಮೀ ಉದ್ದದ ಜೀವಂತ ಜಿರಲೆಯನ್ನು ಹೊರತೆಗೆಯಲಾಗಿದೆ. ವಸಂತ್ ಕುಂಜ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಸುಧಾರಿತ ಎಂಡೋಸ್ಕೋಪಿಕ್ ತಂತ್ರಗಳನ್ನು ಬಳಸಿಕೊಂಡು ಕೇವಲ 10 ನಿಮಿಷಗಳಲ್ಲಿ ಜಿರಲೆಯನ್ನು ಹೊರ ತೆಗೆಯಲಾಗಿದೆ ಎಂದು ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ.

ಯುವಕನು ಬೀದಿ ಬದಿಯಲ್ಲಿ ಆಹಾರವನ್ನು ತಿದ್ದಿದ್ದನ್ನು. ಹಾಗೂ ಸತತ 3 ದಿನಗಳಿಂದ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದನ್ನು. ಜೀರ್ಣ ಕ್ರಿಯೆಗೆ ಸಹ ತೊಂದರೆಯಾಗಿತ್ತು ಎಂದು ಗ್ಯಾಸ್ಟ್ರೋಎಂಟರಾಲಜಿಯ ಹಿರಿಯ ಸಲಹೆಗಾರ ಡಾ.ಶುಭಮ್ ವತ್ಸ್ಯ ಹೇಳಿದರು.

ಮೇಲ್ಭಾಗದ ಜಠರಗರುಳಿನ (ಜಿಐ) ಎಂಡೋಸ್ಕೋಪಿ ನಡೆಸಲಾಯಿತು, ಇದು ರೋಗಿಯ ಸಣ್ಣ ಕರುಳಿನಲ್ಲಿ ಜೀವಂತ ಜಿರಳೆ ಅಡಗಿರುವುದನ್ನು ಬಹಿರಂಗಪಡಿಸಿತು ಎಂದು ಡಾ.ಶುಭಮ್ ವತ್ಸ್ಯ ಹೇಳಿದರು.

ಡ್ಯುಯಲ್ ಚಾನೆಲ್‌ಗಳೊಂದಿಗೆ ವಿಶೇಷ ಎಂಡೋಸ್ಕೋಪ್ ಅನ್ನು ಬಳಸಿ ಒಂದು ಗಾಳಿ ಮತ್ತು ನೀರಿನ ದ್ರಾವಣಕ್ಕೆ, ಹಾಗೂ ಹೀರುವಿಕೆಗೆ ಎರಡರ ಮೂಲಕ ವೈದ್ಯ ತಂಡವು ಯಶಸ್ವಿಯಾಗಿ ಕೀಟವನ್ನು ಹೊರತೆಗೆಯಿತು ಎಂದು ಅವರು ಹೇಳಿದರು.

ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ಇಂತಹ ಪ್ರಕರಣಗಳು ಜೀವಕ್ಕೆ ಅಪಾಯ ತಂದೊಡ್ಡುವ ಅಪಾಯವಿದೆ ಎಂದು ಎಚ್ಚರಿಸಿದರು. ರೋಗಿಯು ತಿನ್ನುವಾಗ ಜಿರಳೆಯನ್ನು ನುಂಗಿರಬಹುದು ಅಥವಾ ಅವನು ಮಲಗಿದ್ದಾಗ ಅದು ಅವನ ಬಾಯಿಗೆ ಪ್ರವೇಶಿಸಿರಬಹುದು ಎಂದು ಅವರು ಹೇಳಿದ್ದಾರೆ.


Share It

You cannot copy content of this page