ಉಪಯುಕ್ತ ಸುದ್ದಿ

ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿ.ಶ 1271 ರ ಶಾಸನ ಪತ್ತೆ!

Share It

ದಾವಣಗೆರೆ: ಜಿಲ್ಲೆಯ ಜಿಲ್ಲೆಯ ಹರಿಹರ ತಾಲೂಕಿನ ಐತಿಹಾಸಿಕ ಹಿನ್ನೆಲೆಯಿರುವ ಎಕಲೆಹೊಳೆ ಗ್ರಾಮದಲ್ಲಿ ಕ್ರಿ.ಶ 1271ರ ಕಾಲದ ಶಾಸನ ಪತ್ತೆಯಾಗಿದೆ.

ಕಪ್ಪು ಕಲ್ಲಿನಲ್ಲಿ ಕೆತ್ತಲಾದ 4 ಅಡಿ ಉದ್ದ, 2 ಅಡಿ ಅಗಲದ 5 ಸಾಲಿನ ಶಾಸನ ಸಿಕ್ಕಿದೆ. ದೇವಗಿರಿಯ ಯಾದವರೆಂದೇ ಪ್ರಸಿದ್ದರಾಗಿದ್ದ ಸೇವುಣರ ಕಾಲದ ಶಾಸನ ಇದು ಎಂದು ತಿಳಿದುಬಂದಿದೆ. ಶಾಸನ ತಜ್ಞ ಕೆ.ರವಿಕುಮಾರ್ ಶಾಸನದ ಅಧ್ಯಯನಕ್ಕಿಳಿದಿದ್ದಾರೆ.

ಯಾದವ ನಾರಾಯಣ ಭುಜಬಳ ಪ್ರೌಢ ಪ್ರತಾಪ ಚಕ್ರವರ್ತಿಯ ಬಿರುದಾವಳಿ ಬಗ್ಗೆ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಯಾದವರ ದೊರೆ ರಾಮಚಂದ್ರನ ಆಡಳಿತಾವಧಿಯನ್ನ ಈ ಶಾಸನ ಸೂಚಿಸುತ್ತದೆ. ಯಾದವ ದೊರೆಗಳು ಗೋವುಗಳನ್ನು ಕದಿಯುತ್ತಿದ್ದ ಶತ್ರುಗಳ ವಿರುದ್ಧ ಹೋರಾಟ ನಡೆಸಿ ಸಾವನ್ನಪ್ಪಿರುವ ವಿಚಾರ ಇದರಲ್ಲಿದೆ.

ಎಳೆಹೊಳೆ ಗ್ರಾಮ ವೀರರ ಪ್ರದೇಶ. ಇಲ್ಲಿ ಈವರೆಗೆ 5 ಶಾಸನಗಳು ಸಿಕ್ಕಿವೆ. ಇನ್ನಷ್ಟು ಶಾಸನಗಳು ಸಿಗುವ ಸಾಧ್ಯತೆಗಳಿವೆ ಎಂದು ಶಾಸನ ತಜ್ಞ ಕೆ.ರವಿಕುಮಾರ್ ಅವರು ಮಾಹಿತಿ ನೀಡಿದರು.


Share It

You cannot copy content of this page