ಫ್ಯಾಷನ್ ಸಿನಿಮಾ ಸುದ್ದಿ

ಇದೇ ನನ್ನ ಕೊನೆಯ ‘ಬಿಗ್ ಬಾಸ್’: ಅಭಿಮಾನಿಗಳಿಗೆ ಶಾಕ್ ನೀಡಿದ ಕಿಚ್ಚ ಸುದೀಪ್

Share It

ಬೆಂಗಳೂರು: ಸತತ ಹನ್ನೊಂದು ಯಶಸ್ವಿ ಸೀಸನ್ ಬಿಗ್ ಬಾಸ್ ನಡೆಸಿಕೊಟ್ಟಿರುವ ಕಿಚ್ಚ ಸುದೀಪ್, ಇದೇ ತಮ್ಮ ಕೊನೆಯ ಸೀಸನ್ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

11 ನೇ ಸೀಸನ್ ನಲ್ಲೇ ಸುದೀಪ್ ನಿರೂಪಕರಾಗಿ ಇರುವುದಿಲ್ಲ ಎಂದು ಹೇಳಲಾಗಿತ್ತು. ಸುದೀಪ್ ಜಾಗದಲ್ಲಿ ಬರುವ ನಡ ಯಾರು ಎಂಬೆಲ್ಲ ಚರ್ಚೆಗಳು ಬಿಗ್ ಬಾಸ್ ಆರಂಭಕ್ಕೆ ಮೊದಲೇ ಚರ್ಚೆಗೆ ಕಾರಷವಾಗಿದ್ದವು. ಚಾನೆಲ್ ಕೂಡ ಕುತೂಹಲ ಕಾಯ್ದುಕೊಂಡೇ ಬಂದು ಕೊನೆಯ ಕ್ಷಣದಲ್ಲಿ ಸುದೀಪ್ ಮುಂದುವರಿಯುವ ಮುನ್ಸೂಚನೆ ನೀಡಿತ್ತು.

ಆದರೆ, ಇದೀಗ 11 ನೇ ಸೀಸನ್ ತಮ್ಮ ಕೊನೆಯ ಬಿಗ್ ಬಾಸ್ ಎಂದು ಸ್ವತಃ ಸುದೀಪ್ ದೃಢಪಡಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸುದೀಪ್ ಬರೆದುಕೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿ ನನ್ನನ್ನು ಧನ್ಯವನ್ನಾಗಿಸಿದೆ. ಆದರೆ, ಇದೇ ನನ್ನ ಕೊನೆಯ ಸೀಸನ್ ಎಂದು ನಾನು ಘೋಷಿಸುತ್ತೇನೆ ಎಂದಿದ್ದಾರೆ.

ಸುದೀಪ್ ಬಿಗ್ ಬಾಸ್ ನಡೆಸಿಕೊಡುವ ರೀತಿಗೆ ಕನ್ನಡ ವೀಕ್ಷಕರು ಫಿದಾ ಆಗಿದ್ದಾರೆ. ಇಡೀ ದೇಶದಲ್ಲಿಯೇ ಸುದೀಪ್ ಅವರ ನಿರೂಪಣೆ ಬಗ್ಗೆ ಮೆಚ್ಚುಗೆ ಇದೆ. ಕನ್ನಡದಷ್ಟು ಬೇರೆ ಯಾವ ಭಾಷೆಯ ಬಿಗ್ ಬಾಸ್ ಕೂಡ ನಿರೂಪಣೆಯಲ್ಲಿ ಜನಮನ ಗಳಿಸಿಲ್ಲ. ಹೀಗಾಗಿ, ಸುದೀಪ್ ಅವರೇ ನಿರೂಪಕರಾಗಿ ಇರಬೇಕು ಎಂಬುದು ಕನ್ನಡ ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ.

ಸುದೀಪ್ ಬಿಗ್ ಬಾಸ್ ನಿಂದ ದೂರವಾದರೆ, ಆ ಜಾಗಕ್ಕೆ ಬರುವ ಮತ್ತೊಬ್ಬ ಸ್ಟಾರ್ ಯಾರು ಎಂಬ ಬಗ್ಗೆಯೂ ಈಗಾಗಲೇ ಚರ್ಚೆ ಆರಂಭವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಬರುತ್ತಾರೆ ಎಂದು ಕೆಲವರು ಹೇಳಿದರೆ, ಮತ್ತೇ ಕೆಲವರು ರಮೇಶ್, ಉಪೇಂದ್ರ ಸೇರಿ ಅನೇಕರ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಚಾನೆಲ್ ಈವರೆಗೆ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ.


Share It

You cannot copy content of this page