ಬೆಂಗಳೂರು: ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ನಟ ದರ್ಶನ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿ ಆದೇಶ ಹೊರಡಿಸಿದೆ
57 ನೇ ಸಿಸಿಎಚ್ ನ್ಯಾಯಾಲಯ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಳ್ಳಾರಿ ಜೈಲಿನಲ್ಲಿ ರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿತ್ತು. ದರ್ಶನ್ ಪರ ವಕೀಲ ಸಿ.ವಿ. ನಾಗೇಶ್, ಕೊಲೆ ದರ್ಶನ್ ಪಾತ್ರವೇ ಇಲ್ಲ ಎಂದು ವಾದ ಮಂಡನೆ ಮಾಡಿದ್ದರು.
ನಡ ದರ್ಶನ್ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಸಾಕ್ಷ್ಯಗಳಿಲ್ಲ, ಅವರನ್ನು ಪೊಲೀಸರು ಬೇಕಂತಲೇ ಪ್ರಕರಣದಲ್ಲಿ ತಂದಿದ್ದಾರೆ. ದರ್ಶನ್ ನಂಬಿಕೊಂಡು ಸಿನಿಮಾ ರಂಗದಲ್ಲಿ ಸಾವಿರಾರು ಜನ ಬದುಕುತ್ತಿದ್ದಾರೆ. ಹೀಗಾಗಿ, ಜಾಮೀನು ಕೊಡಬೇಕು ಎಂಬುದು ಸಿ.ವಿ. ನಾಗೇಶ್ ವಾದವಾಗಿತ್ತು.
ಆದರೆ, ಸರಕಾರದ ಪರ ವಕೀಲರು, ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವ ಮತ್ತು ಅದರಿಂದ ಸಾಕ್ಷಿಗಳ ಮೇಲೆ ಬೀರುವ ಪ್ರಭಾವಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ವಾದ ವಿವಾದವನ್ನು ಆಲಿಸಿದ್ದ ನ್ಯಾಯಾಲಯ, ಇಂದು ತೀರ್ಪು ಪ್ರಕಟ ಮಾಡಿದ್ದು, ಅರ್ಜಿ ವಜಾಗೊಳಿಸಿದೆ.
ಇದೀಗ ದರ್ಶನ್ ಪರ ವಕೀಲರು, ದರ್ಶನ್ ಬೆನ್ನು ನೋವಿನ ಕಾರಣವನ್ನಿಟ್ಟುಕೊಂಡು ಹೈಕೋರ್ಟಿನ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಈ ನಡುವೆ ಎ 1 ಆರೋಪಿ, ದರ್ಶನ್ ಗೆಳತಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ಸಹ ನ್ಯಾಯಾಲಯ ತಿರಸ್ಕಾರ ಮಾಡಿದೆ. ಇನ್ನುಳಿದ ಕೆಲ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.