ಅಪರಾಧ ಸುದ್ದಿ

ಪಾಕಿಸ್ತಾನ್ ಜಿಂದಾಬಾದ್ ಕೂಗಿದವನಿಗೆ ದಿನಕ್ಕೆ 21 ಬಾರಿ ರಾಷ್ಟ್ರಧ್ವಜಕ್ಕೆ 21 ವಂದನೆ ಸಲ್ಲಿಸುವ ಶಿಕ್ಷೆ: ಮಧ್ಯಪ್ರದೇಶ ಹೈಕೋರ್ಟ್ ನಿಂದ ವಿಶೇಷ ತೀರ್ಪು

Share It

ನವದೆಹಲಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನದಲ್ಲಿರುವ ವ್ಯಕ್ತಿಯೊಬ್ಬನಿಗೆ ಮಧ್ಯಪ್ರದೇಶ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಆದರೆ, ವಿಶೇಷ ಷರತ್ತು ವಿಧಿಸಿರುವ ಹೈಕೋರ್ಟ್, ಆತ ಪೊಲೀಸ್‌ ಠಾಣೆಯಲ್ಲಿ ರಾಷ್ಟ್ರಧ್ವಜಕ್ಕೆ 21 ಬಾರಿ ವಂದನೆ ಸಲ್ಲಿಸಬೇಕು ಮತ್ತು ವಿಚಾರಣೆ ಅಂತ್ಯವಾಗುವ ತನಕ ತಿಂಗಳಿಗೆ ಎರಡು ಬಾರಿ ಭಾರತ್‌ ಮಾತಾ ಕಿ ಜೈ ಘೋಷಣೆ ಕೂಗಬೇಕು ಎಂದು ತಿಳಿಸಿದೆ.

ನ್ಯಾಯಮೂರ್ತಿ ದಿನೇಶ್ ಕುಮಾರ್ ಪಾಲಿವಾಲ್ ಅವರು ಆರೋಪಿ ಫೈಝಲ್‌ಗೆ ಜಾಮೀನು ಮಂಜೂರು ಮಾಡಿದ್ದು, ಪ್ರಕರಣವು ಇತ್ಯರ್ಥವಾಗುವವರೆಗೆ ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು ಭೋಪಾಲ್‌ನ ಮಿಸ್ರೋಡ್ ಪೊಲೀಸ್‌ ಠಾಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದ್ದಾರೆ.

ನಿಲ್ದಾಣದಲ್ಲಿ ಪ್ರದರ್ಶಿಸಲಾದ ತ್ರಿವರ್ಣ ಧ್ವಜದ ಮುಂದೆ ನಿಂತು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಮಾಡುತ್ತಾ 21 ಬಾರಿ ಸೆಲ್ಯೂಟ್ ಮಾಡಬೇಕು ಎಂದೂ ತಿಳಿಸಲಾಗಿದೆ. ಫೈಜಲ್ ಗೆ ತನ್ನ ಜವಾಬ್ದಾರಿಯ ಪ್ರಜ್ಞೆಯನ್ನು ಮತ್ತು ಅವನಿಗೆ ತನ್ನ ದೇಶದ ಬಗ್ಗೆ ಹೆಮ್ಮೆ ಮೂಡಬೇಕು ಎಂಬ ಉದ್ದೇಶದಿಂದ ಹೀಗೆ ಆದೇಶ ಮಾಡಿದ್ದೇವೆ ಎಂದು ನ್ಯಾಯಾಧೀಶರು ವಿವರಿಸಿದ್ದಾರೆ.

ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್ ಎಂಬ ಘೋಷಣೆ ಕೂಗುವ ಮೂಲಕ, ಫೈಜಲ್ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಲು ಪ್ರಯತ್ನಿಸಿದ್ದ ಮತ್ತು ಈ ಕೃತ್ಯವು ಸಾಮರಸ್ಯ ಕೆಡಿಸುತ್ತದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು


Share It

You cannot copy content of this page