ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಗೆ ಆಲ್ ಔಟ್ ಆಗಿ ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾದ ಬ್ಯಾಟರ್ ಗಳು ಇಂದು ಎರಡನೇ ಇನ್ನಿಂಗ್ಸ್ ನಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
ಇಂದು ಕಿವೀಸ್ ಪರ ಬ್ಯಾಟ್ ಬೀಸಿದ ಯುವ ಆಲ್ ರೌಂಡರ್ ರಚಿನ್ ರವೀಂದ್ರ ತನ್ನ ತವರು ನೆಲದಲ್ಲಿ ತನ್ನ ಟೆಸ್ಟ್ ಕೆರಿಯರ್ ನ ಎರಡನೇ ಶತಕ ಭಾರಿಸಿ ಮಿಂಚಿದರು. ಇನ್ನಿಂಗ್ಸ್ ನ ಕೊನೆಯುದ್ಧಕ್ಕೂ ಕ್ರೀಸ್ ಕಚ್ಚಿ ನಿಂತ ರಚಿನ್ ರವೀಂದ್ರ 4 ಸಿಕ್ಸರ್ 13 ಬೌಂಡರಿ ಸೇರಿ ಬರೋಬ್ಬರಿ 134ರನ್ ಗಳಿಸಿದರು.
ಮತ್ತೊಂದೆಡೆ ರಚಿನ್ ರವೀಂದ್ರಗೆ ಸಾಥ್ ಕೊಟ್ಟ ವೇಗಿ ಟೀಮ್ ಸೋದಿ 4 ಸಿಕ್ಸರ್ 5 ಬೌಂಡರಿ ಸಹಿತ 65 ರನ್ ಸಿಡಿಸಿ ನ್ಯೂಜಿಲೆಂಡ್ ಅನ್ನು 400 ರ ಗಡಿ ಡಾಟಲು ಸಫಲರಾದರು. ಇನ್ನು ಮೊದಲ ದಿನದ ಅಂತ್ಯಕ್ಕೆ ಕಿವೀಸ್ ಬರೋಬ್ಬರಿ 402 ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿದರು.
ಬಳಿಕ ಎರಡನೇ ಇನ್ನಿಂಗ್ಸ್ ಶುರು ಮಾಡಿದ ನಾಯಕ ರೋಹಿತ್ ಶರ್ಮ ಮತ್ತು ಯಶಸ್ವಿ ಜೈಸ್ವಾಲ್ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಜೈಸ್ವಾಲ್ 35 ರನ್ ಭಾರಿಸಿ ಅಜಾಸ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ರೋಹಿತ್ ಶರ್ಮ ಭರ್ಜರಿ ಅರ್ಧ ಶತಕ ಭಾರಿಸಿದರು.
ಬಳಿಕ ಕಣಕ್ಕಿಳಿದ ವಿರಾಟ್ ಕೊಹ್ಲಿ 1 ಸಿಕ್ಸರ್ 8 ಬೌಂಡರಿ ಸಹಿತ 70 ರನ್ ಗಳಿಸಿ ತನ್ನ ಟೆಸ್ಟ್ ಕೆರಿಯರ್ ನಲ್ಲಿ 9000 ರನ್ ಕಲೆಹಾಕಿದರು. ನಂತರ ಪಂದ್ಯದ ಮೂರನೇಯ ದಿನದ ಕೊನೆಯ ಬಾಲ್ ವಿಕೆಟ್ ಕಳೆದುಕೊಂಡು ಶತಕ ವಂಚಿತರಾಗಿ ಹೊರನೆಡೆದರು.
ಇನ್ನು ಸಾರ್ಫಾರಾಜ್ ಖಾನ್ ಕೇವಲ 78 ಬಾಲ್ ಗಳಲ್ಲಿಯೇ 70 ರನ್ ಚಚ್ಚುವ ಮೂಲಕ ನಾಲ್ಕನೇಯ ದಿನದಲ್ಲಿ ಶತಕ ಸಿಡಿಸುವ ನಿರೀಕ್ಷೆಯಲ್ಲಿದ್ದಾರೆ. ಟೀಮ್ ಇಂಡಿಯಾದ ಬ್ಯಾಟರ್ ಗಳು ಮೂರನೇಯ ದಿನದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 231 ರನ್ ಗಳಿಸಿದ್ದಾರೆ.
ಶಿವರಾಜು ವೈ. ಪಿ
ಎಲೆರಾಂಪುರ