ಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ನುಗ್ಗಿದ ಲಾರಿ: ಹೋಟೆಲ್ ಮಾಲೀಕ ಇಬ್ಬರ ಸಾವು

Share It

ಚಿಂತಾಮಣಿ: ಚಾಲಕನ ನಿಯಂತ್ರಣ ತಪ್ಪಿದ ಜಲ್ಲಿ ತುಂಬಿದ್ದ ಲಾರಿ ಹೋಟೆಲ್ ಒಳಗೆ ನುಗ್ಗಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಚಿಂತಾಮಣಿ ನಗರದ ಕೋಲಾರ ಸರ್ಕಲ್‌ನಲ್ಲಿ ಗುರುವಾರ ನಡೆದಿದೆ.

ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಕ್ಯಾಶ್ ಕೌಂಟರ್ ನಲ್ಲಿ ಕುಳಿತಿದ್ದ ದರ್ಶಿನಿ ಫಾಸ್ಟ್ ಫುಡ್ ಮಾಲೀಕ ಶಿವಾನಂದ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೋಟೆಲ್ ನಲ್ಲಿ ಆಹಾರ ತಯಾರಿಸುತ್ತಿದ್ದ ಬಾಣಸಿಗ ಕುಮಾರ್ (50) ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಹಾಗೂ ಚಿಂತಾಮಣಿಯ ವಿನಾಯಕ ನಗರದ ನಿವಾಸಿ ಶ್ರೀನಿವಾಸ್ ಬಾಬು ಎಂಬುವವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಚಿಂತಾಮಣಿ ನಗರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಯಂತ್ರಗಳ‌ ಮೂಲಕ ಟಿಪ್ಪರ್ ಲಾರಿಯನ್ನು ತೆರವುಗೊಳಿಸಿದರು. ಹೊಟೇಲ್ ಬಿದ್ದ ಜೆಲ್ಲಿ ತೆರವು ಮಾಡಿಸಿದ್ದಾರೆ.


Share It

You cannot copy content of this page