ಉಪಯುಕ್ತ ಸುದ್ದಿ

ವಿಮಾನ ನಿಲ್ದಾಣಕ್ಕೆ ಜಾಗ ಹುಡುಕಾಡಿದ ತಮಿಳುನಾಡು ಸರ್ಕಾರ

Share It

ಬೆಂಗಳೂರು: ರಾಜ್ಯದ ಗಡಿಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ಬೆಂಗಳೂರು ಸುತ್ತಮುತ್ತ ಜಾಗ ಹುಡುಕುತ್ತಿದೆ. ಈಗಾಗಲೆ ಬಿಡಿದಿ, ಹೇರೋಹಳ್ಳಿ, ಕುಣಿಗಲ್, ತುಮಕೂರು ಮತ್ತು ಜಿಗಣಿ ಸುತ್ತಮುತ್ತ ಖಾಲಿ ಜಾಗಕ್ಕೆ ತಮಿಳುನಾಡು ಸರ್ಕಾರ ಹುಡುಕಾಟ ನಡೆಸಿದೆ.

ಜಿಗಣಿ ಭಾಗದಲ್ಲಿ ಕನಿಷ್ಠ 4 ಸಾವಿರ ಏಕರೆ ಜಾಗ ಅಲಭ್ಯ ಹಿನ್ನೆಲೆಯಲ್ಲಿ ಬಿಡದಿ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸರ್ಕಾರಕ್ಕೆ ಒಲವು ಹೆಚ್ಚಾಗಿದೆ.

ಏಕಕಾಲಕ್ಕೆ ಎರಡು ವಿಮಾನ ನಿಲ್ದಾಣಗಳನ್ನು ನಿರ್ಮಿಸುವಂತೆ ಕ್ಯಾಪ್ಟನ್ ಗೋಪಿನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇದರಿಂದಾಗಿ ಕೈಗಾರಿಕೆ ಹಾಗೂ ಸಂಚಾರ ಸಂಪರ್ಕದ ಮೇಲೆ ದೂರಗಾಮಿ ಸತ್ಪರಿಣಾಮ ಬೀರಲಿದೆ ಎಂದಿದ್ದಾರೆ. ಆದರೆ, ತಮಿಳುನಾಡು ಸರ್ಕಾರ ಸದ್ಯ ಒಂದು ವಿಮಾನ ನಿಲ್ದಾಣ ನಿರ್ಮಾಣದತ್ತ ಒಲವು ಹೊಂದಿದೆ.


Share It

You cannot copy content of this page