ನಾವು ಈಗ ತಾನೇ ಮಾತಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಫೋನ್ ಅಲ್ಲಿ ಜಾಹೀರಾತು ಬಂತು ಎಂದರೆ, ಅಯ್ಯೋ ನಾನು ಈ ವಸ್ತುವನ್ನು ಹುಡುಕುತ್ತಿದೆ. ಮೊಬೈಲ್ ಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೇ. ನಿಜ ಸಂಗತಿ ಎಂದರೆ ಮೊಬೈಲ್ ನಾವು ಮಾತನಾಡುವ ಎಲ್ಲ ವಿಚಾರಗಳನ್ನು ಕೇಳಿಸಿಕೊಳ್ಳುತ್ತದೆ ಎಂಬ ಸಂಗತಿಯನ್ನು ನೀವು ನಂಬಲೇ ಬೇಕು. ಅಷ್ಟಕ್ಕೂ ಇದು ಹೇಗೆ ಸಾಧ್ಯ ಎಂಬುದನ್ನ ತಿಳಿಯೋಣ.
ಇಂದಿನ ಯುಗದಲ್ಲಿ ನೀವು ಅಂಗಡಿಗೆ ಹೋಗಿ ವಸ್ತುಗಳನ್ನು ಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಬೆರಳ ತುದಿಯಲ್ಲೇ ಎಲ್ಲವೂ ದೊರೆಯುತ್ತದೆ. ಅದು ಈಗ ಇನ್ನು ಸುಲಭವಾಗಿದೆ. ನೀವು ಫೋನಿನ ಬಳಿ ನಿಮಗೆ ಬೇಕಾದ ವಸ್ತುವಿನ ಬಗ್ಗೆ ಮಾತನಾಡಿದರೆ ಸಾಕು ಫೋನ್ ಆ ವಸ್ತುವಿಗೆ ಸಂಬಂಧಿಸಿದಂತೆ ಜಾಹೀರಾತನ್ನು ನಿಮಗೆ ತೋರಿಸುತ್ತದೆ.
ನಮ್ಮ ಮೊಬೈಲ್ ನಲ್ಲಿ AI ಆಧಾರಿತ ಆಕ್ಟಿವ್ ಲಿಸನಿಂಗ್ ಸಾಫ್ಟ್ವೇರ್ ಅನ್ನು ನಮ್ಮ ಸಂಭಾಷಣೆಯನ್ನು ಕೇಳಿಸಿಕೊಳ್ಳಲು ಏಜೆನ್ಸಿ ಕಾಕ್ಸ್ ಮೀಡಿಯಾ ಗ್ರೂಪ್ ತಂತ್ರಾಂಶವನ್ನು ಬಲಕ್ರಡುತ್ತಿದೆ ಎಂದು 404 ಮೀಡಿಯಾ ವರದಿ ಮಾಡಿದೆ. ಇದು ನಮ್ಮ ಮೊಬೈಲ್ ಬಳಕೆಯ ವರ್ತನೆಗಳ ಬಗ್ಗೆ ಹಾಗೂ ನಮ್ಮ ಧ್ವನಿಯನ್ನು ಸಂಗ್ರಹ ಮಾಡುತ್ತದೆ. ನಾವು ಏನನ್ನು ಬಯಸುತ್ತೇವೆಯೋ ಅದನ್ನು ಜಾಹೀರಾತು ರೂಪದಲ್ಲಿ ನೀಡಲು ಸಹಾಯ ಮಾಡುತ್ತದೆ. ಇದು ಮಾರುಕಟ್ಟೆ ವಿಸ್ತರಣೆಗೆ ಸಹಕಾರಿಯಾಗಿದೆ.
ಈ ತಂತ್ರಾಂಶವು ಮುಖ್ಯವಾಗಿ ಮೊಬೈಲ್ ಬಳಕೆದಾರರ ಆಸಕ್ತಿ ಮತ್ತು ಅಭಿರುಚಿಯನ್ನು ತಿಳಿದುಕೊಳ್ಳುತ್ತದೆ. ಅಂದ್ರೆ ನಾವು ಒಂದು ವೇಳೆ ಒಂದು ವಸ್ತುವನ್ನು ಕೊಂಡುಕೊಳ್ಳಬೇಕು ಎಂದು ಮೊಬೈಲ್ ಮುಂದೆ ಮಾತನಾಡಿದರೆ. ಕೆಲವು ಗಂಟೆಗಳಲ್ಲಿ ನಮ್ಮ ಮೊಬೈಲ್ ನಲ್ಲಿ ಆ ವಸ್ತುವಿನ ಜಾಹೀರಾತು ಬರಲು ಶುರುವಾಗುತ್ತದೆ.