ಉಪಯುಕ್ತ ಸುದ್ದಿ

ವಿಜಯಪುರ: ಅಕ್ಕಮಹಾದೇವಿ ವಿವಿಯಲ್ಲಿ 2024-25 ರ ಪ್ರವೇಶಾತಿ ಆರಂಭ!

Share It

ಪದವಿಯನ್ನು ಮುಗಿಸಿ ಸ್ನಾತಕೋತ್ತರ ಪದವಿಯನ್ನು ಮಾಡುವ ಆಸೆ ಇದೆಯ. ಆಗಿದ್ರೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯು 2024 -25 ನೆ ಸಾಲುಗಳು ವಿವಿಧ ಸ್ನಾತಕೋತ್ತರ ಕೋರ್ಸ್ ಗಳಿಗೆ ಅರ್ಜಿಯನ್ನು ಕರೆದಿದೆ. ಯಾವ ಯಾವ ಕೋರ್ಸ್ ಗಳು ಲಭ್ಯವಿವೆ. ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.

ಬಿ.ಪಿಎಡ್, ಸರ್ಟಿಫಿಕೇಟ್, ಮತ್ತು ಡಿಪ್ಲೊಮ, ಸ್ನಾತಕೋತ್ತರ ಡಿಪ್ಲೊಮ, ಅಡ್ವಾನ್ಸ್‌ ಡಿಪ್ಲೊಮ ಕೋರ್ಸುಗಳ ಪ್ರವೇಶಕ್ಕೆ ಅರ್ಜಿಗಳನ್ನು ವಿವಿಯು ಕರೆದಿದೆ.

ಆಸಕ್ತಿಯುಳ್ಳ ಮಹಿಳಾ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕಾಲೇಜಿನ ಅಧಿಕೃತ ವೆಬ್ ಸೈಟ್ ಆದ www.kswu.ac.in ನಲ್ಲಿ uucms ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಯ ಶುಲ್ಕ ST,SC ಮತ್ತು ಪ್ರವರ್ಗ 1 ಅಭ್ಯರ್ಥಿಗಳು 200 ರೂಗಳನ್ನು ಅರ್ಜಿಯ ಶುಲ್ಕವಾಗಿ ಪಾವತಿ ಮಾಡಬೇಕು. ಸಾಮಾನ್ಯ ಅಭ್ಯರ್ಥಿಗಳು 400 ರೂಗಳನ್ನು ಅರ್ಜಿಯ ಶುಲ್ಕವಾಗಿ ಪಾವತಿ ಮಾಡಬೇಕಿದೆ. 20.10.2024 ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿಯಲ್ಲಿ ಅಂಕಪಟ್ಟಿಗಳು, ಜಾತಿ ಪ್ರಮಾಣ ಪತ್ರ, 371(ಜೆ) ಪ್ರಮಾಣ ಪತ್ರ ಆಧಾರ್ ಕಾರ್ಡ್‌, ಫೋಟೋ ಪ್ರತಿಗಳನ್ನು ಸಲ್ಲಿಸಬೇಕು. ವಿದ್ಯಾರ್ಥಿಗಳನ್ನು ಮೆರಿಟ್ ಮತ್ತು ರೋಸ್ಟೋ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಲಭ್ಯವಿರುವ ವಿಷಯಗಳು

ಕಲಾ ವಿಭಾಗ
ಕನ್ನಡ, ಉರ್ದು, ಇಂಗ್ಲಿಷ್ ಪ್ರದರ್ಶನ ಕಲೆಗಳು ಮತ್ತು ಹಿಂದಿ

ಸಮಾಜ ವಿಜ್ಞಾನ ವಿಭಾಗ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮಹಿಳಾ ಅಧ್ಯಯನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಇತಿಹಾಸ, ಸಮಾಜಕಾರ್ಯ, ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರ, ಸಮಾಜಶಾಸ್ತ್ರ,

ವಿಜ್ಞಾನ ವಿಭಾಗ

ರಸಾಯನಶಾಸ್ತ್ರ, ಗಣಿತ, ಜೈವಿಕ ಮಾಹಿತಿ ವಿಜ್ಞಾನ, ಔಷಧೀಯ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ,ಆಹಾರ ಸಂಸ್ಕರಣೆ ಮತ್ತು ಪೌಷ್ಟಿಕತೆ, ಗಣಕ ವಿಜ್ಞಾನ, ವಿದ್ಯುನ್ಮಾನ, ಭೌತಶಾಸ್ತ್ರ.

ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಅಧ್ಯಯನ

ವಾಣಿಜ್ಯ ಮತ್ತು ವ್ಯವಹಾರ ಆಡಳಿತ

ಶಿಕ್ಷಣ ವಿಭಾಗ

ಶಿಕ್ಷಣ ಮತ್ತು ದೈಹಿಕ ಶಿಕ್ಷಣ

ಪಿಎಚ್.ಡಿ ಅರ್ಜಿ

ಕನ್ನಡ, ಮಹಿಳಾ ಅಧ್ಯಯನ, ಇಂಗ್ಲಿಷ್, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸಮಾಜಕಾರ್ಯ,ಜೈವಿಕ ಮಾಹಿತಿವಿಜ್ಞಾನ, ಔಷಧೀಯ ರಸಾಯನಶಾಸ್ತ್ರ,ಗಣಕ ವಿಜ್ಞಾನ,ವ್ಯವಹಾರಾಡಳಿತ (ಎಂಬಿಎ), ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ, ಎಂ.ಕಾಮ್, ಶಿಕ್ಷಣ ಮತ್ತು ದೈಹಿಕ ಶಿಕ್ಷಣ ವಿಷಯಗಳಲ್ಲಿ ಪಿಎಚ್.ಡಿ. ಪದವಿಗಾಗಿ ಅಧ್ಯಯನಕ್ಕೆ ಅವಕಾಶವಿದೆ.

ಎಂ.ಫಿಲ್ ಗೆ ಅರ್ಜಿ

ಕನ್ನಡ, ಮಹಿಳಾ ಅಧ್ಯಯನ, ಇಂಗ್ಲಿಷ್, ಸಮಾಜಶಾಸ್ತ್ರ, ವ್ಯವಹಾರಾಡಳಿತ ಅಧ್ಯಯನ (ಎಂ.ಬಿ.ಎ.), ಶಿಕ್ಷಣ ಮತ್ತು ದೈಹಿಕ ಶಿಕ್ಷಣ, ಅರ್ಥಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಔಷಧೀಯ ರಸಾಯನಶಾಸ್ತ್ರ, ಸಮಾಜಕಾರ್ಯ, ಎಂ.ಕಾಮ್, ವಿಷಯಗಳಲ್ಲಿ ಎಂ.ಫಿಲ್. ಪದವಿಗಾಗಿ ಅವಕಾಶವಿದೆ.


Share It

You cannot copy content of this page