ಭೂಮಿ ಮೇಲೆ ದಾಳಿ ಮಾಡಲು ಸಜ್ಜಾಗುತ್ತಿವೆಯಾ ಏಲಿಯನ್ ಗಳು? ವಿಜ್ಞಾನಿಗಳಿಗೆ ಕಾಡುತ್ತಿದೆ ಹೀಗೊಂದು ಅನುಮಾನ !
ವಿಶ್ವವೇ ಒಂದು ವಿಸ್ಮಯ ತಾಣ. ಮನುಷ್ಯ ಎಷ್ಟೇ ಆಧುನಿಕಗೊಂಡರು ಈ ಬ್ರಹ್ಮಾಂಡದಲ್ಲಿ ಎಳ್ಳಷ್ಟು ಎಂಬುದನ್ನು ನಮಗೆಲ್ಲರಿಗೂ ಗೊತ್ತಿದೆ. ಹಲವು ಬಾರಿ ಅನ್ಯಗ್ರಹ ಜೀವಿಗಳನ್ನು ನಾವು ನೋಡಿದ್ದೇವೆ. ಅವು ಆಕಾಶದಲ್ಲಿ ಕಂಡವು ಹೀಗೆ ಹತ್ತಾರು ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಸದ್ಯ ಇಸ್ರೋದ ಅಧ್ಯಕ್ಷ ಸೋಮನಾಥ್ ಹೇಳಿರುವಂತೆ ನಮ್ಮ ಬ್ರಹ್ಮಾಂಡದಲ್ಲಿ ಭೂಮಿಗಿಂತ ಸಾವಿರಾರು ವರ್ಷ ಮುಂದಿರುವ ಹಾಗೂ ನಮಗಿಂತ ಇನ್ನೂರು ವರ್ಷಗಳ ಹಿಂದೆ ಇರುವ ಗ್ರಹಗಳು ಇರಬಹುದು ಎಂದು ಊಹಿಸಿದ್ದಾರೆ.
ಇಲ್ಲಿಯವರೆಗೆ ಭೂಮಿಯಲ್ಲಿ ಮಾತ್ರ ಒಂದು ಜೀವಿ ಬದುಕಲು ಸಹಕಾರಿಯಾದ ವಾತಾವರಣ ಇರುವುದು ಎಂದು ಅಂದುಕೊಂಡಿದ್ದೆವು. ಆದರೆ ಇತ್ತೀಚಿನ ಸಂಶೋಧನೆಗಳಲ್ಲಿ ಅದು ಹುಸಿಯಾಗುತ್ತಿದೆ. ನಮ್ಮಂತೆಯೇ ಇತರ ಗ್ರಹಗಳು ಇರಬಹುದು ಎಂಬ ನಂಬಿಕೆಯನ್ನು ಹುಟ್ಟು ಹಾಕುತ್ತಿದೆ.
ಈಗಾಗಲೇ ಮಂಗಳ ಗ್ರಹದಲ್ಲಿ ಅಮೇರಿಕಾದ ನಾಸಾ ದ ರೋವರ ಸಂಶೋಧನೆ ನಡೆಸುತ್ತಿದ್ದು ಅಲ್ಲಿ ಜೀವ ಇತ್ತು ಎಂದೂ ಅಲ್ಲಿ ಜೀವಿಸಲು ಯೋಗ್ಯ ವಾತಾವರಣ ಇದೆ ಎಂಬ ಸುಳಿವನ್ನು ನೀಡುತ್ತಿದೆ. ಆದರೆ ಇನ್ನಷ್ಟು ಸಂಶೋಧನೆಗಳ ನಡೆಯಬೇಕಿದೆ. ಯಾವುದೋ ಮೂಲೆಯಲ್ಲಿ ಅನ್ಯಗ್ರಹ ಜೀವಿಗಳ ಇದ್ದೆ ಇವೆ ಎಂದು ವಿಜ್ಞಾನಿಗಳು ವಾದಿಸುತ್ತಾರೆ.
ರಣವೀರ್ ಅಲ್ಲಾಬಾಡಿಯಾ ಎಂಬುವರ ಯೂಟ್ಯೂಬ್ ಚಾನೆಲ್‌ಗೆ ಸಂರ್ದಶನ ನೀಡಿರುವ ಸೋಮನಾಥ್ ಬ್ರಹ್ಮಾಂಡದಲ್ಲಿ ಅನ್ಯಗ್ರಹ ಜೀವಿಗಳು ಇರುವ ಸಾಧ್ಯತೆ ಹೆಚ್ಚಾಗಿದೆ. ನಮಗಿಂತ ಅಥವಾ ನಮಗಿಂತ ಕಡಿಮೆ ಮುಂದುವರೆದ ಗ್ರಹಗಳು ಇರಬಹುದು ಎಂದು ಹೇಳಿದ್ದಾರೆ.
ನನ್ನ ಅದೃಷ್ಟ ನಾನು ಇದುವರೆಗೂ ಅನ್ಯಗ್ರಹ ಜೀವಿಗಳ ಸಂಪರ್ಕಕ್ಕೆ ಬಂದಿಲ್ಲ . ಅವುಗಳು ನಮಗಿಂತ ಬಹಳ ಭಿನ್ನವಾಗಿ ಇರುತ್ತವೆ ಪ್ರೋಟಿನ್ ಯುಕ್ತ ದೇಹವನ್ನು ಹೊಂದಿರುತ್ತವೆ. ಅವು ನಮ್ಮನ್ನು ವಿಶ್ವದ ಯಾವುದೋ ಮೂಲೆಯಿಂದ ಗಮನಿಸುತ್ತಿವೆ. ಒಂದು ವೇಳೆ ಭೂಮಿಗೂ ಅನ್ಯ ಗ್ರಹ ಜೀವಿಗಳಿಗೂ ಯುದ್ದ ಸಂಭವಿಸಿದರೇ ಗೆಲುವಿಗೆ ತೀವ್ರ ಹೋರಾಟ ನಡೆಯಲಿದೆ ಎಂದು ಹೇಳಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆಯು ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳು ಬದುಕುತ್ತಿವೆ ಎಂಬ ಮಾಹಿತಿಯನ್ನು ತಿಳಿಸಿದೆ. ಈ ವರದಿಯನ್ನು ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಮ್‌ನ ಸಂಶೋಧಕರ ಹೊಸ ಪ್ರಬಂಧ ಉಲ್ಲೇಖ ಮಾಡಲಾಗಿದೆ ಎಂದು ವಿವರಿಸಿದ್ದಾರೆ.


