ಅಪರಾಧ ಸುದ್ದಿ

ನಿಪ್ಪಾಣಿಯಲ್ಲಿ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ

Share It

ಬೆಳಗಾವಿ : ನಿಪ್ಪಾಣಿಯ ಬಾದಲ್ ಪ್ಲಾಟ್ ನಲ್ಲಿ 10 ವರ್ಷದ ಬಾಲಕಿಗೆ 10 ರೂಪಾಯಿ ನೀಡಿ ಅಮಿಷವೊಡ್ಡಿ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಸೀಫ್ ಬಾಗವಾನ್ ಈ ನೀಚ ಕೃತ್ಯ ಎಸಗಿದವ. ಬಾಲಕಿ ಆಗಾಗ ತನ್ನ ಅಂಗಾಂಗವನ್ನು ಮುಟ್ಟಿ ಗಮನಿಸುತ್ತಿದ್ದಾಗ ಪಾಲಕರು ಗಮನಿಸಿದ್ದಾರೆ. ಆಗ ಬಾಲಕಿ ವಿಷಯ ತಿಳಿಸಿದ್ದಾಳೆ.

ನಂತರ ಪಾಲಕರು ಆತನನ್ನು ಆಗಸ್ಟ್ 18ರ ರವಿವಾರ ಥಳಿಸಿದ್ದಾರೆ. ಬುಧವಾರ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page