ಅಪರಾಧ ಸುದ್ದಿ

ಪರಸ್ಪರ ಡಿಕ್ಕಿ ಹೊಡೆದ ಕಾರುಗಳು : ಒಬ್ಬನ ದುರ್ಮರಣ

Share It

ಬೆಳಗಾವಿ :ಗೋವಾದಿಂದ ಹುಬ್ಬಳ್ಳಿ ಮಾರ್ಗವಾಗಿ ತೆಲಂಗಾಣಕ್ಕೆ ಹೊರಟಿದ್ದ ಪ್ರಯಾಣಿಕರಿದ್ದ ಕಾರು ಅಳ್ನಾವರದಿಂದ ರಾಮನಗರ ಕಡೆಗೆ ಹೊರಟಿದ್ದ ಕಾರಿಗೆ ಎದುರಿನಿಂದ ಬಂದು ವೇಗವಾಗಿ ಅಪ್ಪಳಿಸಿದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.

ಮೃತರನ್ನು ವಾಸ್ಕೋ ನಿವಾಸಿ ಅಮೀರಖಾನ ಬೆಂಡಿಗೇರಿ (26) ಎಂದು ಗುರುತಿಸಲಾಗಿದೆ. ಮೃತರ ಸಹೋದರ ನೀಡಿದ ದೂರಿನನ್ವಯ ಆಂಧ್ರಪ್ರದೇಶದ ಮೂಲದ ರಾಜಶೇಖರ ರೆಡ್ಡಿ ವಿರುದ್ಧ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page