ಅಪರಾಧ ಸುದ್ದಿ

ಮಗಳನ್ನು ಕೊಲ್ಲಲು ಸುಪಾರಿ ಕೊಟ್ಟು ತಾನೇ ಹೆಣವಾದ ಮಹಿಳೆ: ಮಗಳ ಚಾಲಾಕಿತನಕ್ಕೆ ತಾಯಿಯ ಜೀವ ಬಲಿ

Share It

ಆಗ್ರಾ: ತನ್ನ 17 ವರ್ಷದ ಮಗಳನ್ನು ಕೊಲ್ಲಲು ವ್ಯಕ್ತಿಯೊಬ್ಬನಿಗೆ ಸುಪಾರಿ ನೀಡಿದ್ದ 35 ವರ್ಷದ ಮಹಿಳೆ ಆತನಿಂದಲೇ ಕೊಲೆಯಾಗಿರುವ ಘಟನೆ ಅ. 6 ರಂದು ಇಟಾ ಜಿಲ್ಲೆಯ ಜಸ್ರತ್‌ಪುರ ನಲ್ಲಿ ಘಟನೆ ನಡೆದಿದೆ.

ಕೊಲೆಯಾದ ದುರ್ದೈವಿ ಆಲ್ಕಾ ಇಟಾ ಜಿಲ್ಲೆಯ ಜಸ್ರತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಲವೊಂದರಲ್ಲಿ ಶವ ಪತ್ತೆಯಾಗಿದೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಶವವು ಇಟಾಹ್‌ನ ನಯಾಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಲಾಪುರ್ ನಿವಾಸಿ ಅಲ್ಕಾ ದ್ದು ಎಂದು ತಿಳಿದು ಬಂದಿದೆ.

ತನ್ನ ಮಗಳ ಪ್ರೀತಿ ಪ್ರೇಮಗಳ ವರ್ತನೆಯಿಂದ ಬೇಸತ್ತ ಆಲ್ಕಾ ತನ್ನ ಮಗಳನ್ನು ಕೊಲ್ಲುವಂತೆ ಸುಭಾಷ್ ಸಿಂಗ್(38) ಎಂಬುವವನಿಗೆ ಸುಪಾರಿಯನ್ನು ನೀಡಿದ್ದಳು. ಅದೇ ರೀತಿ ಮಹಿಳೆ ಮತ್ತು ಸುಭಾಷ್ ಮಗಳನ್ನು ಬುಧವಾರ ರಾತ್ರಿ ಬಂಧಿಸಿದ್ದರು.

ಕೆಲ ತಿಂಗಳುಗಳ ಹಿಂದೆ ಮಗಳು ಸ್ಥಳೀಯ ಹುಡುಗನೊಂದಿಗೆ ಓಡಿ ಹೋಗಿದ್ದಳು. ಬಳಿಕ ಕರೆತಂದ ಆಲ್ಕಾ ಫರೂಕಾಬಾದ್‌ನಲ್ಲಿರುವ ತನ್ನ ತಾಯಿಯ ಮನೆಗೆ ಬಿಡುತ್ತಾಳೆ. ಮಗಳು ಮತ್ತು ಸುಭಾಷ್ ನಡುವೆ ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುತ್ತಿರುತ್ತಾರೆ. ಇದನ್ನು ಗಮನಿಸಿದ ಚಿಕ್ಕಪ್ಪ ಆಲ್ಕಾ ಗೆ ಮಗಳನ್ನು ಮನೆಗೆ ಕರೆದೊಯ್ಯುವಂತೆ ಹೇಳುತ್ತಾರೆ. ಇದರಿಂದ ಬೇಸತ್ತ ಆಲ್ಕಾ ಮಗಳನ್ನು ಕೊಲ್ಲಲು ನಿರ್ಧರಿಸುತ್ತಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಸೆ.27 ರಂದು ಆಲ್ಕಾ ಸುಭಾಷ್ ನನ್ನು ಸಂಪರ್ಕಿಸಿ 50 ಸಾವಿರ ರೂಗಳನ್ನು ನೀಡಿ ಸುಪಾರಿ ನೀಡಿದ್ದಾಳೆ. ಮಗಳು ತನ್ನ ತಾಯಿಯನ್ನು ಕೊಂದರೆ ನಿನ್ನನ್ನು ಮದುವೆಯಾಗುವುದಾಗಿ ಹೇಳಿದ್ದ ಸುಭಾಷ್ ತಾಯಿಯನ್ನು ಕೊಂಡಿದ್ದಾನೆ. ತನಿಖೆಯ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page