ಉಪಯುಕ್ತ ಸುದ್ದಿ

ದೇಶದ ಪ್ರತಿಷ್ಠಿತ ಸಾರಿಗೆ ಸಂಸ್ಥೆಗೆ 63 ರ ಸಂಭ್ರಮ: KSRTCಯಲ್ಲೀಗ ಪುನಶ್ಚೇತನ ಪರ್ವ

Share It

ಬೆಂಗಳೂರು: ದೇಶದ ಪ್ರತಿಷ್ಠಿತ ಸಾರಿಗೆ ಸಂಸ್ಥೆ ಎನಿಸಿಕೊಂಡಿರುವ KSRTC ತನ್ನ 63 ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿದೆ.

63 ನೇ ವರ್ಷಾಚರಣೆ ಅಂಗವಾಗಿ ಪ್ರಥಮ ಬಾರಿಗೆ ಪುನಶ್ಚೇತನ ಗೊಂಡ ಐರಾವತ ಕ್ಲಬ್ ಕ್ಲಾಸ್ ಬಸ್ ಗಳಿಗೆ ಚಾಲನೆ ನೀಡಲಾಗುತ್ತದೆ. ಅಪಘಾತದಲ್ಲಿ ಮೃತರ ಅವಲಂಬಿತರಿಗೆ ಸಾರಿಗೆ ಸುರಕ್ಷಾ ವಿಮಾ ಯೋಜನೆಯ 1 ಕೋಟಿ ರು. ಚೆಕ್ ವಿತರಣೆ ಮಾಡಲಾಗುತ್ತದೆ.

ನಿಗಮದ ಆಂತರಿಕ ನಿಯತಕಾಲಿಕ ಸಾರಿಗೆ ಸಂಪದ ಬಿಡುಗಡೆ ಹಾಗೂ ವಾಹನಗಳ ಪುನಶ್ಚೇತನ ಕೈಪಿಡಿ ಬಿಡುಗಡೆ ಮಾಡಲಾಗುತ್ತದೆ. ಬಸ್ ಗಳ ಪುನಶ್ಚೇತನಕ್ಕೆ ವಿಭಾಗ ಹಾಗೂ ಕಾರ್ಯಗಾರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಅನುಕಂಪದ ಆಧಾರದ ಮೇಲೆ ನೇಮಕಗೊಂಢ 45 ಮೃತರ ಅವಲಂಬಿತರಿಗೆ ಸ್ವಚ್ಚತಾ ಗಾರ ಹುದ್ದೆಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಅನುಕಂಪದ ಆಧಾರದಲ್ಲಿ ನೇಮಕಗೊಂಡ 103 ಮೃತರ ಅವಲಂಬಿತರಿಗೆ KST ಕಾನ್ಸ್ ಟೇಬಲ್‌ ಹುದ್ದೆಗೆ ನೇಮಕಾತಿ ಆದೇಶ ವಿತರಣೆ ಮಾಡಲಾಗುತ್ತದೆ.

ಅನುಕಂಪದ ಆಧಾರದಲ್ಲಿ ನೇಮಕಗೊಂಡ 4 ಮೃತರ ಅವಲಂಬಿತರಿಗೆ ತಾಂತ್ರಿಕ ಸಹಾಯಕ ಹಾಗೂ ನಿರ್ವಾಹಕ ಹುದ್ದೆಗೆ ನೇಮಕಾತಿ ಆದೇಶ ಪತ್ರ ನೀಡಲಾಗುತ್ತದೆ. ಪ್ರಾದೇಶಿಕ ಕಾರ್ಯಾಗಾರಗಳಲ್ಲಿನ ಕ್ಯಾಂಟೀನ್ ಗಳ ನವೀಕರಣಕ್ಕೆ ನಗದು ಬಿಡುಗಡೆ ಮಾಡಲಾಗುತ್ತದೆ. ಕಳೆದ 22 ತಿಂಗಳಲ್ಲಿ ಶೂನ್ಯ ಅಪಘಾತ ದಾಖಲಿಸಿದ ಪಾವಗಡ ಘಟಕ ಹಾಗೂ ಘಟಕ ವ್ಯವಸ್ಥಾಪಕರಿಗೆ ನಗದು ಬಹುಮಾನ ವಿತರಣೆ ಮಾಡಲಾಗುತ್ತದೆ.

ಅಕ್ಟೋಬರ್16 ರ ಬುಧವಾರ ಬೆಳಗ್ಗೆ 11.30 ಕ್ಕೆ ಶಾಂತಿನಗರದ ಘಟಕ 2 ರ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, KSRTC ಅಧ್ಯಕ್ಷರಾದ ಶ್ರೀನಿವಾಸ್ (ವಾಸು), ಉಪಾಧ್ಯಕ್ಷ ಮಹಮದ್ ರಿಜ್ವಾನ್ ನವಾಬ್, ಎನ್.ಎ.ಹ್ಯಾರೀಸ್, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಹಾಗೂ KSRTC ಎಂಡಿ ವಿ. ಅನ್ಬುಕುಮಾರ್, ಡಾ.ಕೆ.ನಂದಿನಿ ದೇವಿ, ನಿರ್ದೇಶಕರು(ಸೀ & ಜಾ) ಅವರು ಭಾಗವಹಿಸಲಿದ್ದಾರೆ.

updating….


Share It

You cannot copy content of this page