ಉಪಯುಕ್ತ ಸುದ್ದಿ

ಕೆ‌ಎಸ್‌ಆರ್‌ಟಿಸಿ’ಯ 63 ನೇ ಮೈಲಿಗಲ್ಲು: ಸಂಸ್ಥಾಪನಾ ದಿನದಂದು ಬಂಪರ್ ಕೊಡುಗೆ

Share It

  • ಕರ್ತವ್ಯದಲ್ಲಿದ್ದಾಗ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರೂ. ಚೆಕ್ ವಿತರಣೆ
  • ಕ್ಲಬ್ ಕ್ಲಾಸ್ ಐರಾವತ 2.0 ಬಸ್ ಗಳ ಲೋಕಾರ್ಪಣೆ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ 63ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಂಡಿದೆ.

ಈ ಸಂದರ್ಭದಲ್ಲಿ ತನ್ನ ನೌಕರರು ಮತ್ತು ಪ್ರಯಾಣಿಕರಿಗೆ ಅನೇಕ ಕೊಡುಗೆಗಳನ್ನು ಕೆಎಸ್ಆರ್ ಟಿಸಿ ಘೋಷಿಸಿದೆ. ಇದರ ಭಾಗವಾಗಿ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟ 3 ಸಿಬ್ಬಂದಿ ಕುಟುಂಬಕ್ಕೆ ಒಂದು ಕೋಟಿ ರೂ. ಚೆಕ್ ಮತ್ತು ಇತರೆ ಕಾರಣದಿಂದ ಮೃತಪಟ್ಟ 37 ಸಿಬ್ಬಂದಿಗೆ 10 ಲಕ್ಷ ರೂ ಚೆಕ್ ಅನ್ನು  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿತರಣೆ ಮಾಡಿದರು.

ಪುನಶ್ಚೇತನಗೊಳಿಸಿದ 3 ಐರಾವತ ಕ್ಲಬ್ ಕ್ಲಾಸ್ ಬಸ್​ಗಳಿಗೂ ಚಾಲನೆ ನೀಡಲಾಯಿತು. ಬಸ್​ಗಳ ಪುನಶ್ಚೇತನ ಕಾರ್ಯಕ್ಕೆ ವಿಭಾಗ ಹಾಗೂ ಪ್ರಾದೇಶಿಕ ಕಾರ್ಯಾಗಾರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶೂನ್ಯ ಅಪಘಾತ ಸಾಧನೆ ಮಾಡಿದ ಪಾವಗಡ ಘಟಕ ಹಾಗೂ ಘಟಕ ವ್ಯವಸ್ಥಾಪಕರಿಗೆ ನಗದು ಪುರಸ್ಕಾರ ನೀಡಲಾಯಿತು.

ಅನುಕಂಪದ ಆಧಾರದ ಮೇಲೆ ಮೃತ ಕುಟುಂಬದವರಿಗೆ ಕೆಎಸ್​ಟಿ (KST) ಕಾನ್ಸಟೇಬಲ್ ಹುದ್ದೆಗೆ ನೇಮಕಾತಿ ಮಾಡುವುದು. ಇನ್ನು ನಿಗಮದ ಆಂತರಿಕ ನಿಯತಕಾಲಿಕೆ ಸಾರಿಗೆ ಸಂಪದ ಮತ್ತು ವಾಹನಗಳ ಪುನಶ್ಚೇತನ ಸಂಚಿಕೆ ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕೆ‌ಎಸ್‌ಆರ್‌ಟಿಸಿಯ ಅಧ್ಯಕ್ಷರು ಸೇರಿ ಕೆ‌ಎಸ್‌ಆರ್‌ಟಿ‌ಸಿ ಎಂಡಿ ಅನ್ಬುಕುಮಾರ್ ಭಾಗಿ ಆಗಿದ್ದರು.

ನೂತನ ಐರಾವತ ಕ್ಲಬ್ ಕ್ಲಾಸ್ 2.0 ಬಸ್​ ಸೇರ್ಪಡೆ 

ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗ್ಗೆ ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ (9600 ಮಾದರಿ)ಯ ಬಸ್​ಗಳು ಸೇರ್ಪಡೆ ಆಗಿವೆ. ಇತ್ತೀಚೆಗೆ ಸಚಿವ ರಾಮಲಿಂಗಾರೆಡ್ಡಿ ಹೊಸಕೋಟೆ ಬಳಿಯಿರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದ್ದರು.

ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ 20 ಬಸ್ಸುಗಳನ್ನು ಕೆಎಸ್​ಆರ್​ಟಿಸಿಯು ಈ ತಿಂಗಳ ಕೊನೆಯ ವಾರದಲ್ಲಿ ವಾಹನಗಳ ಸಮೂಹಕ್ಕೆ ಸೇರ್ಪಡೆಗೊಳಿಸಲಿದೆ. ಕರ್ನಾಟಕವು ವಿವಿಧ ಮಾದರಿಯ ಅತ್ಯಾಧುನಿಕ ಬಸ್ಸುಗಳನ್ನು ಪ್ರಯಾಣಿಕರ ಬೇಡಿಕೆಗನುಣವಾಗಿ ಸೇರ್ಪಡೆ ‌ಗೊಳಿಸುತ್ತಿರುವುದರಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ


Share It

You cannot copy content of this page