ಪ್ರೆಂಚ್ ರಾಯಭಾರಿಯ ಮೊಬೈಲ್ ಕದ್ದ ಚಾಂದನಿ ಚೌಕ್ ಕಳ್ಳರು!
ಬೆಂಗಳೂರು: ಪ್ರೆಂಚ್ ರಾಯಭಾರಿಯ ಮೊಬೈಲ್ ಅನ್ನೇ ಎಗರಿಸಿದ ಆರೋಪದ ಮೇಲೆ ನಾಲ್ವರು ಕಳ್ಳರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಪ್ರೆಂಚ್ ರಾಯಭಾರಿ ಥಿಯರಿ ಮೌತಾ ಅವರು, ಚಾಂದಿನಿ ಚೌಕ್ ಪ್ರದೇಶಕ್ಕೆ ಅಕ್ಟೋಬರ್ 20 ರಂದು ತಮ್ಮ ಪತ್ನಿ ಸಮೇತ ಭೇಟಿ ನೀಡಿದ್ದರು. ಈ ವೇಳೆ ಅವರ ಜೇಬಿನಿಂದ ಮೊಬೈಲ್ ಫೋನ್ ಎಗರಿಸಲಾಗಿತ್ತು.
ಈ ಸಂಬಂಧ ರಾಯಭಾರ ಕಚೇರಿಯಿಂದ ದೂರು ಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಮಾಹಿತಿ ಪಡೆದುಕೊಂಡು, ತನಿಖಾ ತಂಡವನ್ನು ರಚನೆ ಮಾಡಿದ್ದರು. ಈ ವೇಳೆ ಚಾಂದನಿ ಚೌಕ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿತ್ತು.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ 20 ರಿಂದ 25 ವರ್ಷ ವಯೋಮಾನದವರಾಗಿದ್ದು, ಎಲ್ಲರೂ ಟ್ರಾನ್ಸ್ ಯಮುನಾ ಪ್ರದೇಶದ ನಿವಾಸಿಗಳು ಎನ್ನಲಾಗಿದೆ.