KSRTCಯಿಂದ ಕ್ರಿಸ್ ಮಸ್ ಕೊಡುಗೆ : ಐಷಾರಾಮಿ ವೋಲ್ವೋ ಅಂಬಾರಿ ಬಸ್‌ಗಳ ಕಾರ್ಯಾಚರಣೆಗೆ ಚಾಲನೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು “ಅಂಬಾರಿ ಉತ್ಸವ” ಸಂಭ್ರಮದ ಪ್ರಯಾಣ” (ವೋಲ್ವೋ -9600s) 20 ಬಸ್ಸುಗಳನ್ನು ಸಾರ್ವಜನಿಕ ಸೇವೆಗೆ ಒದಗಿಸಲು ತೀರ್ಮಾನಿಸಿದೆ.
ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಸ್ ಗಳ ಸೇವೆಗೆ ಡಿಸೆಂಬರ್ 24ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ದಲ್ಲಿ ಚಾಲನೆ ನೀಡಲಿದ್ದಾರೆ.
ಕಾರ್ಯಲ್ರಮದಲ್ಲಿ 20 ಹೊಸ ಬಸ್ ಗಳು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿವೆ. KSRTC ಅಧ್ಯಕ್ಷ ಶ್ರೀನಿವಾಸ್ (ಗುಬ್ಬಿ ಶ್ರೀನಿವಾಸ್) ಹಾಗೂ ಉಪಾಧ್ಯಕ್ಷ ಮದ್ ರಿಜ್ವಾನ್ ನವಾಬ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ.