ಬೆಂಗಳೂರು: ತುಮಕೂರು ಅಥವಾ ಬಿಡದಿಯ ಬಳಿ ಎರಡನೇ ಏರ್ ಪೋರ್ಟ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಜಾಗದ ಕುರಿತು ಅಂತಿಮ ತೀರ್ಮಾನ ಆಗಬೇಕಿದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ಮೆಟ್ರೋ ಸಿಟಿಗಳಲ್ಲಿ ಎರಡೆರಡು ವಿಮಾನ ನಿಲ್ದಾಣಗಳಿವೆ. ಬೆಂಗಳೂರು ಏರ್ ಪೋರ್ಟ್ ಈಗಾಗಲೇ ಜನನಿಬಿಡ ಎನಿಸಿಕೊಂಡಿದೆ. ಹೀಗಾಗಿ, ಎರಡನೇ ಏರ್ ಪೋರ್ಟ್ ನಿರ್ಮಾಣದ ಅವಶ್ಯಕತೆ ಇದೆ. ಇದಕ್ಕಾಗಿ ಏರ್ ಪೋರ್ಟ್ ನಿರ್ಮಾಣ ಪ್ರಸ್ತಾವನೆ ಜಾರಿಯಲ್ಲಿದೆ ಎಂದು ತಿಳಿಸಿದರು.
ತಮಕೂರು ಜಿಲ್ಲೆಯ ಕುಣಿಗಲ್ ಹಾಗೂ ರಾಮನಗರ ಜಿಲ್ಲೆಯ ಬಿಡದಿಯ ಸಮೀಪದಲ್ಲಿ ಏರ್ ಪೋರ್ಟ್ ನಿರ್ಮಾಣಕ್ಕೆ ಜಾಗ ಅಂತಿಮಗೊಳಿಸಲಾಗಿದೆ. ಕೇಂದ್ರ ಸರಕಾರದ ವಿಮಾನಯಾನ ಇಲಾಖೆ ಜಾಗದ ಪರಿಶೀಲನೆ ನಡೆಸಿ, ಅಂತಿಮಗೊಳಿಸಬೇಕಾಗಿದೆ. ಅವರು ಯಾವ ಜಾಗ ಅಂತಿಮಗೊಳಿಸುತ್ತಾರೆ ಅಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದರು.