ಬೆಂಗಳೂರು: ಬೆಂಗಳೂರು ಅರಮನೆ ಭೂ ಬಳಕೆ ವಿಚಾರವಾಗಿ ವಿಧಾನಸಭಾ ಕಲಾಪದಲ್ಲಿ ಗುರುವಾರ ರಾಜ್ಯಸರ್ಕಾರ ಮತ್ತು ವಿ.ಪಕ್ಷಗಳ ಮಧ್ಯೆ ಜಟಾಪಟಿ ಕೊನೆಗೂ ಮುಕ್ತಾಯವಾದಂತಾಗಿದೆ.
ವಿರೋಧ ಪಕ್ಷಗಳ ಸದಸ್ಯರ ತೀವ್ರ ಗದ್ದಲ, ವಿರೋಧದ ಮಧ್ಯೆಯೂ ಇಂದು ವಿಧಾನಸಭೆ ಕಲಾಪದಲ್ಲಿ ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕವೂ ಅಂಗೀಕಾರವಾಗಿದೆ.
ವಿಧೇಯಕ ಕುರಿತಾಗಿ ಸದನದಲ್ಲಿ ಆಡಳಿತ ಪಕ್ಷ, ವಿರೋಧಪಕ್ಷದ ನಡುವೆ ಜಟಾಪಟಿ ನಡೆಯಿತು. ರಾಜಕೀಯ ದ್ವೇಷಕ್ಕಾಗಿ ವಿಧೇಯಕ ತಂದಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಚಾಮುಂಡೇಶ್ವರಿ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಎಂದು ವಿ.ಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಸಹ ಕಿಡಿ ಕಾರಿದ್ದಾರೆ.