ಬೆಳಗಾವಿ ಮೇಯರ್, ಉಪಮೇಯರ್ ಅವಿರೋಧ ಆಯ್ಕೆ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ 41ನೇ ವಾರ್ಡಿನ ಸದಸ್ಯ ಮಂಗೇಶ ಪವಾರ್ ಮತ್ತು ಉಪಮೇಯರ್ ಅಗಿ ವಾರ್ಡ್ ನಂಬರ್ 44ರ ಸದಸ್ಯೆ ವಾಣಿ ಜೋಶಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎರಡು ಸ್ಥಾನಗಳು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಪಾಲಾಗಿದೆ. ಈ ಮೂಲಕ ಶಾಸಕ ಅಭಯ ಪಾಟೀಲ ಮತ್ತೊಮ್ಮೆ ಮಹಾನಗರ ಪಾಲಿಕೆಯಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದಂತಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದು ಇದೀಗ ಮತ್ತೊಮ್ಮೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳು ಕಮಲ ಪಕ್ಷದ ಪಾಲಾಗಿವೆ.


